ಮತದಾನ ಜಾಗೃತಿ ಮೂಡಿಸಿದ ಹನುಮಂತ


ಸವಣೂರು,ಡಿ.28-ಭಾನುವಾರ ನಡೆದ 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯ ಸರಿಗಮಪ ಖ್ಯಾತಿಯ ಹನುಮಂತ ಲಮಾಣಿ ತಮ್ಮ ಹುಟ್ಟೂರಾದ ಸವಣೂರ ತಾಲೂಕಿನ ಚಿಲ್ಲೂರ ಬಡ್ನಿ ಗ್ರಾಮದಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.
ನಾನು ಮತ ಚಲಾಯಿಸಿದ್ದೇನೆ, ನೀವು ಕೂಡಾ ಮತ ಚಲಾಯಿಸಿ ಯೋಗ್ಯ ಅಭ್ಯರ್ಥಿಗಳಿಗೆ ಮತದಾನ ಮಾಡಿ ಪ್ರಜಾ ಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿ ಎಂದು ಮತದಾನದ ಮಹತ್ದದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಈ ಕುರಿತು ತರಬೇತಿ ನೋಡಲ್ ಅಧಿಕಾರಿಗಳಾದ ಅಣ್ಣಪ್ಪ ಹೆಗಡೆ ಮಾತನಾಡಿ, ಇಂದು ಹನುಮಂತಪ್ಪ ಅವರು ಆಗಮಿಸಿ ಮತದಾನ ಮಾಡಿ ಯುವಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ತಾಲೂಕಿನಲ್ಲಿ ಈ ಹಿಂದೆ ತಮ್ಮ ಸುಮಧುರ ಕಂಠದಿಂದ ಕೋವಿಡ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದು, ಮತದಾನದ ಕುರಿತಾದ ಸ್ವೀಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿರುವ ಕುರಿತು ಪ್ರಶಂಸೆ ವ್ಯಕ್ತಪಡಿಸಿರು.