ಮತದಾನ ಜಾಗೃತಿ ಜಾಥಾ

ಮುನವಳ್ಳಿ,ಏ4: ಸಮೀಪದ ಯಕ್ಕುಂಡಿ ಗ್ರಾಮ ಪಂಚಾಯತಿಯಲ್ಲಿ ಸ್ಥಳೀಯ ಸ್ವಿಪ್ ಸಮೀತಿ ವತಿಯಿಂದ ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ ಮತ್ತು ಕಾರ್ಲಕಟ್ಟಿ ತಾಂಡೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾರರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಪ್ರತಿಯೊಬ್ಬ ಮತದಾರರು ಯಾವುದೆ ಆಸೆ- ಆಮಿಷಕ್ಕೆ ಒಳಗಾಗದೆ ಮತದಾನ ಮಾಡಲು ತಿಳಿಸಲಾಯಿತು. ಈ ಸಂದರ್ಭದಲ್ಲಿ ಪಿಡಿಒ ಶ್ರೀಶೈಲಗೌಡ ಎನ್, ಲೆಕ್ಕಸಹಾಯಕ ಲಕ್ಷ್ಮಣ ಬಟಕುರ್ಕಿ, ಸಂಗಮೇಶ ಸಿದ್ನಾಳ, ಮಲ್ಲಿಕಾರ್ಜುನ ಶಿಂದೋಗಿ, ಮಹಿಳಾಒಕ್ಕೂಟದ ಅಧ್ಯಕ್ಷೆ ಶೈನಾಜ ಮುಜಾವರ, ರಾಜೇಶ್ವರಿ ಮೊರಬದ, ಗ್ರಂಥಪಾಲಕಿ ಬಸವ್ವ ಹಿಟ್ಟಣಗಿ, ಅಂಗನವಾಡಿ ಕಾರ್ಯಕರ್ತೆ ಮಮತಾಜ ಬಾರಿಗಿಡದ, ಬೋರಮ್ಮ ಮಠಪತಿ, ಚಂದ್ರಕಲಾ ಹಿರೇಮಠ, ಬಿಬಿಆಯೆಶಾ ಬಾರಿಗಿಡದ, ಸವಿತಾ ಮುತವಾಡ, ಸಕ್ಕುಬಾಯಿ ಹೂಲಿಕಟ್ಟಿ, ಭಾರತಿ ಗೌಡರ, ಆಶಾಕಾರ್ಯಕರ್ತೆ ರತ್ನವ್ವ ಪಾಟೀಲ, ಬಸವ್ವ ಮಠಪತಿ, ಗಂಗವ್ವ ಪೂಜೇರ, ಸಂಗಿತಾ ಕಾಂಬಳೆ, ರುಕ್ಮೀಣಿ ಲಮಾಣಿ ಮುಂತಾದವರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.