ಮತದಾನ ಜಾಗೃತಿ ಜಾಥಾ

ಹುಬ್ಬಳ್ಳಿ,ಏ23 :ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಮಹಾವಿದ್ಯಾಲಯದ ಶಿಕ್ಷಕ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಣಕಲ್ ಗ್ರಾಮದಲ್ಲಿ “ಮತದಾನ ಜಾಗೃತಿ ಜಾಥಾ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಜಾಥಾದ ನೇತೃತ್ವವನ್ನು ವಹಿಸಿದ್ದ ಪ್ರಾಚಾರ್ಯ ಡಾ ಲಿಂಗರಾಜ ಸಿ ಮುಳ್ಳಳ್ಳಿ ಯವರು ಮತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಜಾಥಾಕ್ಕೆ ವಿದ್ಯಾನಗರ ಪೊಲೀಸ ಠಾಣೆಯ ಇನ್ಸಪೆಕ್ಟರ್ ಎ.ಎಚ್ ನೆಲ್ಲೂರ, ಸಿ.ಎಲ್.ನಾಯಕ್ ಹಾಗೂ ಎಸ್.ಸಿ ಪಾಟೀಲ ಮತ್ತು ಸಿಬ್ಬಂದಿಯವರು ಶಿಸ್ತನ್ನು ಪಾಲಿಸುವಲ್ಲಿ ಸಹಕರಿಸಿದರು. ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ ಲಕ್ಷ್ಮೀ ಜಾಧವ, ವೀರೇಶ ಕಲಕೇರಿ, ಅರ್ಚನಾ ಪೂಜಾರ, ಡಾ ಅನಿಲ ಗುಮಗೋಳ, ಸುಪ್ರೀತಾ ಎಂ.ಬಿ, ಪ್ರದೀಪ ಲಕ್ಷೆಟ್ಟಿ ಮತ್ತು ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ, ಬಿ.ಎಡ್ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು, ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.