
ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಏ,13- ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ಇಂದು ಮತದಾನ ಜಾಗೃತಿ ಜಾಥಾ ನಡೆಯಿತು. ಮೇ 10 ರಂದು ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಇಂದು ಪಟ್ಟಣದ ತಾಲೂಕು ಪಂಚಾಯಿತಿ ಸೀಫ್ ವತಿಯಿಂದ ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ಮತದಾನ ನಮ್ಮ ಹಕ್ಕು, ದಾನದಲ್ಲಿ ದಾನ ಶ್ರೇಷ್ಠ ದಾನ ಮತದಾನ .ಎಂಬ ನಾಮ ಫಲಕ ದೊಂದಿಗೆ ಬೈಕ್ ರ್ಯಾಲೀ ನಡೆಸಲಾಯಿತು.
ತಾಲೂಕು ಪಂಚಾಯಿತಿ ಸೀಫ್ ವತಿಯಿಂದ ಕೋನ ಸಾಗರ ,ಕೊಂಡ್ಲಹಳ್ಳಿ, ಬಿಜಿಕೆರೆ, ಹಾನಗಲ್,ರಾಯಾಪುರ, ತುಮಕೂರ್ಲಹಳ್ಳಿ ಹಿರೇಕೆರಹಳ್ಳಿ, ದೇವ ಸಮುದ್ರ ಈ 8 ಪಂಚಾಯಿತಿಗಳಲ್ಲಿ ಇಓ ಜಾನಕೀ ರಾಮ್ ರವರ ನೇತೃತ್ವದಲ್ಲಿ ಬೈಕ್ ಱ್ಯಾಲಿ ಮೂಲಕ ಮತದಾನ ಜಾಗೃತಿ ಜಾತ ನಡೆಯಿತು.
One attachment • Scanned by Gmail