ಮತದಾನ ಜಾಗೃತಿ ಜಾಥಾ: ಪ್ರತಿಜ್ಞಾವಿಧಿ

ಅರಕೇರಾ,ಏ.೩೦- ಕರ್ನಾಟಕ ಸಾರ್ವತ್ರಿಕ ಚುನಾವಣೆ ೨೦೨೩ ಕ್ಕೆ ಸಂಬಂದಿಸಿದಂತೆ ಅರಕೇರಾ ಗ್ರಾಮಪಂಚಾಯತ, ಶಿಕ್ಷಣಇಲಾಖೆ, ಅಂಗನವಾಡಿಮೇಲಿಚಾರಕರು ಕಾರ್ಯಕರ್ತರು ಸಹಾಯಕಿಯರು ಆಶಾಕಾರ್ಯಕರ್ತರು ಸಹಯೋಗದೊಂದಿಗೆ ಮತದಾರರ ಜಾಗೃತಿ ಮತದಾನದ ಮಹತ್ವ ಜಾಥಾಕ್ಕೆ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬೂದೇಪ್ಪಯಾದವ ಚಾಲನೆ ನೀಡಿದರು.
ಇಂದುಮತದಾನದ ಧ್ವಜಾರೋಹಣ ಕಾರ್ಯಕ್ರಮ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಶ್ರೀಸಿದ್ದಯ್ಯ ಹವಲ್ದಾರ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿನ ಬೂತಮಟ್ಟದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮತದಾನ ಜಾಗೃತಿಯಪ್ರತಿಜ್ಞಾವಿಧಿಯನ್ನು ಬೂದೇಪ್ಪಯಾದವ ಬೋದಿಸಿದರು.
ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಜಗಧೀಶಪ್ಪ ಬಿ.ಗಣೇಕಲ್, ದೇವೀಂದ್ರಪ್ಪ ರೇಕಲಮರಡಿ, ಯಮನಪ್ಪಕುಂಬಾರ ಬಿಲ್‌ಕಲ್ಟೇರ್, ಇಬ್ರಾಹಿಂಸಾಬ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.