ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ

ಸಂಜೆವಾಣಿ ವಾರ್ತೆ

ದಾವಣಗೆರೆ. ಮಾ.೨೪; ಭಾರತ ಚುನಾವಣಾ ಆಯೋಗ ಆದೇಶದಂತೆ  ಜಿಲ್ಲಾಡಳಿತದ ನಿರ್ದೇಶನದಂತೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಡಿಯಲ್ಲಿ ಚನ್ನಗಿರಿ ಪುರಸಭೆ ವತಿಯಿಂದ  ಮುಖ್ಯ ಅಧಿಕಾರಿಗಳು, ತಾಲೂಕು ಸಹಾಯಕ ನೊಂದಣಾಧಿಕಾರಿಗಳು ಹಾಗೂ ತಹಶೀಲ್ದಾರ್  ಚನ್ನಗಿರಿ,  ಪೊಲೀಸ್ ಉಪಾಧೀಕ್ಷಕರು,  ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಇವರ ಉಪಸ್ಥಿತಿಯಲ್ಲಿ 2024ರ ಲೋಕಸಭಾ ಚುನಾವಣೆ ನಿಮಿತ್ತ ಸ್ವೀಪ್ ಕಾರ್ಯಕ್ರಮದ ಅಡಿಯಲ್ಲಿ ಮತದಾನ ಮಾಡುವ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಹಶೀಲ್ದಾರ್  ಚಾಲನೆ ನೀಡಿದರು. ಜಾಥಾ ಮೂಲಕ ಪಟ್ಟಣದ ಐಬಿ ವೃತದಲ್ಲಿ ಮತದಾನ ಮಾಡುವ ಪ್ರತಿಜ್ಞಾವಿಧಿಯನ್ನು  ಮುಖ್ಯಾಧಿಕಾರಿಗಳು ಬೋಧಿಸಿದರು ಎಲ್ಲರೂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು ಹಾಗೂ ಪಟ್ಟಣದ ವಿವಿಧ ಬೀದಿಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕವಾಗಿ ಕಡ್ಡಾಯ ಮತದಾನ ಮಾಡುವ ಘೋಷಣೆಗಳ ಮೂಲಕ ಮತದಾನ ಜಾಗೃತಿ ಮತ್ತು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪಟ್ಟಣದ ಗಂಗಾ ಪ್ಯಾರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಪುರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಲು ಸಹಕರಿಸಿದರು.