ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ

ಗದಗ,ಏ11: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಬೆಟಗೇರಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್. ಎಸ್. ನೀಲಗುಂದ ಮತ್ತು ಗದಗ ತಾಲೂಕಾ ಪಂಚಾಯತಿ ಅಧಿಕಾರಿಗಳಾದ ಮಾಣಿಕರಾವ್ ಪಾಟೀಲ್ ಅವರು ಚಾಲನೆ ನೀಡಿದರು.
ಲೋಕಸಭಾ ಚುನಾವಣಿ-2024ರ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ “ಮತ ಚಲಾವಣೆ ನಿಮ್ಮ ಹಕ್ಕು ತಪ್ಪದೇ ನಿಮ್ಮ ಮತ ಚಲಾಯಿಸಿ” ಎಂಬ ಈ ಘೋಷ ವಾಕ್ಯದೊಂದಿಗೆ ಅರಿವು ಮೂಡಿಸುವ ಮುಖಾಂತರ ಬೆಟಗೇರಿ ಬಸ್ ನಿಲ್ದಾಣದಿಂದ ಕನ್ಯಾಳ ಅಗಸಿ, ಗಾರಗಿಪೇಟೆ, ಒಕ್ಕಲಗೇರಿ ಮುಖಾಂತರ ಕುರಹಟ್ಟಿ ಪೇಟೆಯವರೆಗೆ ಬಂದು ತಲುಪಿತು. ಗದಗ ತಾಲೂಕಿನ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಾಯ್ ವಾಯ್ ಹಕ್ಕಿಯವರು ಪ್ರತಿಜ್ಞೆ ವಿಧಿಯನ್ನು ಬೋಧಿಸುವ ಮೂಲಕ ಜಾಥಾ ಕಾರ್ಯಕ್ರಮವು ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಗದಗ ತಾಲೂಕಾ ಆರೋಗ್ಯಾಧಿಕಾರಿ ಡಾ. ಪೀತ್ ಖೋನಾ, ವೈದ್ಯಾಧಿಕಾರಿ ಸ್ಪರ್ಶಾ ಚಿನ್ನಪ್ಪಗೌಡರ, ಡಾ. ಮಧುಮತಿ, ಡಾ.ಮಹೇಶ ಕೊಪ್ಪಳ, ಡಾ. ಜಯಕುಮಾರ ಬ್ಯಾಳಿ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಧಿಕಾರಿ ಉಮೇಶ ಕರಮುಡಿ, ಗದಗ ತಾಲೂಕಿನ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎನ್ ಲಿಂಗದಾಳ, ಅಜಯಕುಮಾರ ಕಲಾಲ, ಕೃಷ್ಣಾ ಗಡರೆಡ್ಡಿ, ಏಕನಾಥ ಪಾಟೀಲ್, ನಾಗರಾಜ ಜೋಶಿ, ಬಿ. ಸಿ. ಹಿರೇಹಾಳ, ಎನ್ ಎನ್ ಪಾಟೀಲ್, ಪ್ರಭು ಹೊನ್ನಗುಡಿ, ಎಸ್.ಬಿ.ಗಡಾದ, ಎಂ. ಹೆಚ್ ಕದಾಂಪೂರ, ವಾಯ್ ಎನ್ ಕಡೇಮನಿ, ನವೀನ ಶಾಂವತ, ಪ್ರಾಥಮಿಕ ಸುರಕ್ಷಾ ಅಧಿಕಾರಿ ಎಂ ಬಿ ಹೆಬ್ಬಾಳ, ಎಸ್ ಎಸ್ ಕಟ್ಟಿಮನಿ ಸಮುದಾಯ ಅರೋಗ್ಯ ಅಧಿಕಾರಿ ಚಂದ್ರ ಪೂಜಾರ, ಮಹೇಶ ಭಜಂತ್ರಿ, ಮತ್ತು ಜಿಲ್ಲಾ ಆಶಾ ಮೆಂಟರ್ ಸುನಿತಾ ಉಮಚಗಿ, ತಾಲೂಕಾ ಆಶಾ ಮೆಂಟರ್ ಶ್ರೀಮತಿ ನವೀನಕುಮಾರಿ ಹಾಗೂ ಗದಗ ತಾಲೂಕಿನ ಆಶಾ ಕಾರ್ಯಕರ್ತೆಯರು ಜಾಥಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.