ಮತದಾನ ಜಾಗೃತಿ ಕಾರ್ಯಕ್ರಮ

ಶ್ರೀರಂಗಪಟ್ಟಣ: ಮೇ.೦೯:- ತಾಲೂಕು ಆಡಳಿತ,ಪುರಸಭೆ ಹಾಗೂ ಶೇಷಾದ್ರಿಪುರಂ ಪದವಿ ಕಾಲೇಜು ವತಿಯಿಂದ ಮತದಾನ ಜಾಗೃತಿಯನ್ನು ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಅಶ್ವಿನಿ ಚಾಲನೆಯನ್ನು ನೀಡಿದರು.
ಶ್ರೀರಂಗಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆರಳಿ ಮತದಾನ ಜಾಗತಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು .
ಜೊತೆಗೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿಯನ್ನು ಮಾಡಿ ಮತದಾನ ಪ್ರತಿಜ್ಞೆಯನ್ನ ಎನ್‌ಎಸ್‌ಎಸ್ ಶಿಬಿರದ ಅಧಿಕಾರಿ ಡಾ.ರಾಘವೇಂದ್ರ ಬೋಧಿಸಿದರು.
ಪುರಸಭೆಯ ಮುಖ್ಯ ಅಧಿಕಾರಿ ಸಂದೀಪ,ಚುನಾವಣಾ ಸಂಪನ್ಮೂಲ ಅಧಿಕಾರಿ ಹಾಗೂ ಶಿರಸ್ತೆದಾರ್ ಡಾ ನವೀನ, ರಾಹುಲ್ ಪ್ರಥಮ ದರ್ಜೆ ಸಹಾಯಕರು, ಎನ್ ಎಸ್‌ಎಸ್ ಕಾರ್ಯಕ್ರಮ ಡಾ.ರಾಘವೇಂದ್ರ ಎನ್‌ಎಸ್‌ಎಸ್ ಸ್ವಯಂಸೇವಕರು ಇನ್ನು ಮುಂತಾದವರು ಈ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.