ಮತದಾನ ಜಾಗೃತಿಯ ಮ್ಯಾರಥಾನ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.05: ಪ್ರಸಕ್ತ ವಿಧಾನ ಸಭಾ ಚುನಸವಣೆಯ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ‌ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ನಡೆಸುತ್ತಿದೆ.
ನಿನ್ನೆ  ಸ್ವೀಪ್ ಸಮಿತಿ ಮತ್ತು ಮಹಾನಗರ ಪಾಲಿಕೆಯಿಂದ ಮತದಾನ ಜಾಗೃತಿ ಮತ್ತು ಸಿ ವಿಜಿಲ್ ಆಪ್ ಬಳಕೆ ಕುರಿತು ಮ್ಯಾರಥಾನ್ ಹಮ್ಮಿಕೊಂಡಿತ್ತು.
ನಗರದ ಗವಿಯಪ್ಪ ವೃತ್ತದಿಂದ ಪ್ರಮುಖ ವಾಣಿಜ್ಯ ಪ್ರದೇಶಗಳ ರಸ್ತೆಗಳಲ್ಲಿ ಈ ಮ್ಯಾರಥಾನ್ ಸಾಗಿತು.
ಜನತೆ ಖಡ್ಡಾಯವಾಗಿ ಮತದಾನ ಮಾಡಿ, ಅಮಿಷಗಳಿಗೆ ಒಳಗಾಗಬೇಡಿ, ಮತದಾನಕ್ಕೆ ಅಮಿಷ ಒಡ್ಡುವವರ ಬಗ್ಗೆ ಮಾಹಿತಿ ನೀಡಲು 1950. ಗೆ ದೂರು ನೀಡಿ, ಇಲ್ಲ ಸೀ ವಿಜಲ್ ಆಪ್ ಬಳಸಿ, ಉತ್ತಮ ಸರ್ಕಾರ ರಚನೆಗೆ ಮತದಾನ ಮಹತ್ವದ್ದು.
ಎ 11 ವರೆಗೆ ಮತಪಟ್ಟಿಯಲ್ಲಿ ನಿಮ್ಮ‌ಹೆಸರು ನೊಂದಾಯಿಸಿಕೊಳ್ಳಿ ಎಂಬ ಬರಹದ ಫಲಕಗಳನ್ನು  ಪಾಲಿಕೆಯ ಪೌರ ಕಾರ್ಮಿಕರು ಹಿಡಿದು ಮ್ಯಾರಥಾನ್ ನಲ್ಲಿ ಸಾಗಿದರು.
ಧ್ವನಿ ವರ್ಧಕದ ಮೂಲಕವೂ ಪ್ರಚಾರ ಮಾಡಲಾಯ್ತು.
ಈ ಕುರಿತು ಮಾತನಾಡಿದ ಸ್ವೀಪ್ ಸಮಿತಿಯ  ಜಿ.ಪಂ ಕ್ಷೇತ್ರ ಅಭಿವೃದ್ದಿ ಅಧಿಕಾರಿ ಪಿ.ಪ್ರಮೋದ ಅವರು. ಮತದಾನದ ಮಹತ್ವದ ಬಗ್ಗೆ ಪ್ರತಿದಿನವೂ ಒಂದೊಂದು ರೀತಿ ಜಾಗೃತಿ‌ ಹಮ್ಮಿಕೊಳ್ಳುತ್ತಿದೆ. ಜನ ಹೆಚ್ಚು ಇರುವ ಪ್ರದೇಶಗಲ್ಲಿ ಸಾಗಿ‌ ಮತದಾನದ   ಮಹತ್ವ ತಿಳಿಸುತ್ತಿದೆ ಎಂದರು.
ಪಾಲಿಕೆಯ ಪರಿಸರ ಅಭಿಯಂತರ ಶ್ರೀನಿವಾಸ್ ಮಾತನಾಡಿ, ಮತದಾನಕ್ಕೆ ಅಮಿಷ ಒಡ್ಡುವುದನ್ನು ತಡೆಯಲು ಜನರೇ ಅಮಿಷದ ಬಗ್ಗೆ ದೂರು ನೀಡಲು ಸೀ ವಿಜಿಲ್ ಆಪ್ ಬಳಕೆ ಮಾಡಬೇಕು ಎಂಬುದನ್ನು ಜನರಿಗೆ ತಿಳಿಸುತ್ತಿದೆಂದರು.