ಕಲಬುರಗಿ,ಏ.29: ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಚಿತ್ತಾಪುರ ತಾಲೂಕಾ ಪಂಚಾಯತ್ ವತಿಯಿಂದ ಶನಿವಾರ ಚಿತ್ತಾಪುರ ಬಸ್ ನಿಲ್ದಾಣದಲ್ಲಿ ನಗೆ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಲಬುರಗಿ ಜಿಲ್ಲಾ ಚುನಾವಣಾ ಸ್ವೀಪ್ ರಾಯಭಾರಿ ಹಾಗೂ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರು ತಮ್ಮ ಹಾಸ್ಯ ಶೈಲಿಯಲ್ಲಿ ಪ್ರತಿಯೊಬ್ಬರು ಕಡ್ಡಯಾವಾಗಿ ಮತದಾನ ಮಾಡಬೇಕು. ಸಂವಿಧಾನಬದ್ಧವಾದ ಹಕ್ಕನ್ನು ಚಲಾತಿಸಬೇಕು. ಆಸೆ, ಆಮೀಷಕ್ಕೆ ಬಲಿಯಾಗದೆ ಉತ್ತಮರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಮೊತ್ತೊಬ್ಬ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರು ಹಾಸ್ಯದ ಮೂಲಕ ಉತ್ತರ ಕನ್ನಡ ಶೈಲಿಯಲ್ಲಿ ಜನರಿಗೆ ರಂಜಿಸಿದಲ್ಲದೆ ಮತದಾನದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ರಾಠೋಡ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.