ಮತದಾನ ಜಾಗೃತಿಗೆ ಬೀದಿ ನಾಟಕ

ಮೈಸೂರು,ಏ.೩೦-ಮಳವಳ್ಳಿಯಲ್ಲಿ ಸ್ವೀಪ್ ಮತದಾನದ ಹಬ್ಬದ ದಿನವನ್ನು ಆಚರಿಸಲು ನಾಗರಿಕರಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ಬೀದಿ ನಾಟಕದೊಡನೆ ಜನಜಾಗೃತಿ ಜಾತವನ್ನು ಹಮ್ಮಿಕೊಳ್ಳಲಾಗಿತ್ತು ಇಂದು ಬೆಳಿಗ್ಗೆ ಮತದಾನದ ಬಾವುಟವನ್ನು ಆರಿಸುವ ಮೂಲಕಸ್ವೀಪ್ ಅಧ್ಯಕ್ಷರಾದ ರಾಮಲಿಂಗಯ್ಯನವರ ನೇತೃತ್ವದಲ್ಲಿ೧೮ ವರ್ಷ ಪೂರೈಸಿದ ಎಲ್ಲಾ ಯುವಕ ಯುವತಿಯರು ಮತದಾನ ಮಾಡುವಂತೆ ಮತದಾನವನ್ನು ಪ್ರತಿಯೊಬ್ಬ ನಾಗರಿಕರು ಮತವನ್ನು ಮಾರಾಟ ಮಾಡಿ ಕೊಳ್ಳದೆ ಪ್ರತಿಯೊಬ್ಬ ನಾಗರಿಕರು ಮತದಾನ ಮಾಡಬೇಕು ಎಂದು ಸ್ವೀಪ್‌ನ ಅಧ್ಯಕ್ಷರಾದ ರಾಮಲಿಂಗಯ್ಯ ಕರೆ ನೀಡಿದರು ಇಂದು ತಾಲೂಕು ಪಂಚಾಯಿತಿಯಿಂದ ಜಾಗೃತಿ ಮೆರವಣಿಗೆ ಹೊರಟು ಬೀದಿ ನಾಟಕದ ಮೂಲಕ ಜನರಲ್ಲಿ ಅರಿವು ಮೂಡಿಸಿ ಕೆಎಸ್‌ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿ ಬೀದಿ ನಾಟಕವನ್ನು ಆಡುವ ಮೂಲಕ ಜನರಲ್ಲಿ ಅರಿವು ಮೂಡಿಸಿ ಪ್ರತಿಯೊಬ್ಬರು ಮತದಾನವನ್ನು ಮಾಡುವಂತೆ ಪಟ್ಟಣದ ನಾಗರಿಕರಲ್ಲಿ ಅರಿವು ಮೂಡಿಸಿದರು ತದನಂತರ ರಸ್ತೆ ಯ ಉದ್ದಕ್ಕೂ ಮತದಾನದ ಅರಿವಿನ ಬಗ್ಗೆ ಜಾಗೃತಿ ಮೂಡಿ ಸುತ್ತ ಸಾರ್ವಜನಿಕರ ಮನ ಸೆಳೆದರು ಇದೇ ಸಂದರ್ಭದಲ್ಲಿಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ನಾಗರಾಜು ಬಿ ಆರ್ ಸಿ ಯ ಶ್ರೀನಿವಾಸ್ ಹಾಗೂ ಇನ್ನೂ ಹಲವು ತಾಲೂಕಿನ ಅಧಿಕಾರಿಗಳು ಹಾಗೂ ಪಂಚಾಯತಿಯ ಸಿಬ್ಬಂದಿ ವರ್ಗದವರು ಇತರೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು