ಮತದಾನ ಜಾಗೃತಿಗೆ ಚುನಾವಣಾ ಸಾಕ್ಷರತಾ ಕ್ಲಬ್ ಆರಂಭ

ಇಂಡಿ:ನ.10: ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಜನಪ್ರತಿನಿಧಿಯ ಆಯ್ಕೆ ಪ್ರಕ್ರಿಯೆ ನೈತಿಕವಾಗಿರಬೇಕು ಎಂಬ ಅರಿವು ಮೂಡಿಸಲು ಚುನಾವಣಾ ಆಯೋಗ ಯೋಜನೆ ಹಮ್ಮಿಕೊಂಡಿದ್ದು, ಶಾಲಾ, ಕಾಲೇಜುಗಳಲ್ಲಿ ‘ಚುನಾವಣಾ ಸಾಕ್ಷರತಾ ಕ್ಲಬ್’ಗಳು
ಆರಂಭಿಸಿದ್ದು ಸಕಾಲಿಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ವಸಂತ ರಾಠೋಡ ಹೇಳಿದರು.
ಅವರು ದಿ:09-11-2021 ರಂದು ಪಟ್ಟಣದ ಬಸವೇಶ್ವರ ಪ್ರೌಢ ಶಾಲೆಯಲ್ಲಿ 2021-22 ನೇ ಸಾಲಿನ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಇಡೀ ಶೈಕ್ಷಣಿಕ ವರ್ಷದಲ್ಲಿ ಎಂಟು ತಾಸಿನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಬೋರ್ಡ್ ಗೇಮ್‍ಗಳು, ಕಾರ್ಡ್ ಗೇಮ್‍ಗಳ ಮೂಲಕ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವುದರಿಂದ ಮೊದಲಾಗಿ ಇವಿಎಂನಲ್ಲಿ ಮತ ಚಲಾವಣೆಯವರೆಗೂ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಚಿದಂಬರ ಬಂಡಗರ ಮಾತನಾಡಿ, ಶಾಲಾ- ಕಾಲೇಜುಗಳಲ್ಲಿ ‘ಚುನಾವಣಾ ಸಾಕ್ಷರತಾ ಕ್ಲಬ್’ ಸ್ಥಾಪಿಸಿ ಇದರ ಮೂಲಕ ವಿದ್ಯಾರ್ಥಿಗಳಿಗೆ ಪ್ರಬಂಧ, ರಸಪ್ರಶ್ನೆ, ಚಿತ್ರ ಬಿಡಿಸುವುದು, ಪೆÇೀಸ್ಟರ್ ತಯಾರಿಕೆ ಮೊದಲಾದ ಸ್ಪರ್ಧೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ, ನೈತಿಕ ಮತದಾನದ ಮಹತ್ವ ತಿಳಿಸಲಾಗುವದು ಎಂದು ಹೇಳಿದರು.
ನೋಡಲ್ ಅಧಿಕಾರಿಗಳಾದ ಆಯ್ ಜಿ ಆಳೂರ ಮಾತನಾಡಿದರು.ಜೆ ಜಿ ಕೊಟಗೊಂಡ ಅಧ್ಯಕ್ಷತೆ ವಹಿಸಿದ್ದರು.
ಬಿ ಆರ್ ಪಿ ಗಳಾದ ಆರ್ ಸಿ ಮೇತ್ರಿ, ಎ ಜಿ ಚೌಧರಿ ಮತ್ತು ಸಿ ಆರ್ ಪಿ ಶ್ರೀಧರ ಹಿಪ್ಪರಗಿ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು,ಸಮಾಜ ವಿಜ್ಞಾನ ಶಿಕ್ಷಕರು,ಮಕ್ಕಳು ಭಾಗವಹಿಸಿದ್ದರು.