ಮತದಾನ ಜಾಗೃತಿಗೆ ಅಂಗವಾಗಿ 150 ಮೀ. ಉದ್ದದ ಧ್ವಜ ಮೆರವಣಿಗೆ


ಬಳ್ಳಾರಿ, ಮೇ 03: ವಿಧಾನಸಭಾ ಸಾರ್ವತ್ರಿಕ ಚುನಾವಣಾ ಅಂಗವಾಗಿ ಜಿಲ್ಲೆಯಲ್ಲಿ ನೂರಕ್ಕೆ ನೂರು ಪ್ರತಿಶತ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಮೂಡಿಸಲು ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ತಾಲೂಕಿನ ಹೋಬಳಿಯಲ್ಲಿ ಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿಯಿಂದ ಗ್ರಾಮದ ಜನರಿಗೆ ಮತದಾನದ ಕುರಿತು ಅರಿವು ಮೂಡಿಸಲು ‘ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ, ನಮ್ಮ ಮತ ನಮ್ಮ ಹಕ್ಕು, ಮತದಾನ ದಿನಾಂಕ ಮೇ 10’ ಸಂಭಾಷಣೆವುಳ್ಳ 150 ಮೀಟರ್ ಉದ್ದದ ಧ್ವಜದ ಮೆರವಣಿಗೆ ಹಮ್ಮಿಕೊಳ್ಳಲಾಯಿತ್ತು.
ಮತದಾನ ಜಾಗೃತಿಯ ಧ್ವಜ ಮೆರವಣಿಗೆಯು ಮೋಕಾದ ಮುದಿ ಮಲ್ಲೇಶ್ವರ ದೇವಾಸ್ಥಾನದಿಂದ ಆರಂಭವಾಗಿ ಮಾರೆಮ್ಮ ದೇವಿ ದೇವಾಸ್ಥಾನ, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ, ಬಳಿಕ ಹೊಸ ಮೋಕಾ ಸಂಯುಕ್ತ ಪದವಿ ಪೂರ್ವ ಕಾಲೇಜ್ ಬಳಿ ಮುಕ್ತಾಯಗೊಂಡಿತು.