
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಏ.3: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಮತದಾನದ ಮಹತ್ವ ಮತ್ತು ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ನಗರದಲ್ಲಿ ನಿನ್ನೆ
ಜಿಲ್ಲಾ ಸ್ವೀಪ್ ಸಮಿತಿಯು ಸೈಕಲ್ ಜಾಥಾ ನಡೆಸಿತು. ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ರಾಹುಲ್ ಶರಣಪ್ಪ ಸಂಕನೂರು ಸೈಕಲ್ ಸವಾರಿ ಮಾಡಿ ಜಾಥಾಗೆ ಚಾಲನೆ ನೀಡಿದರು.
ಜಾಥಾವು ಐಟಿಐ ಕಾಲೇಜ್ ಮೈದಾನದಿಂದ ಆರಂಭವಾಗಿ ರೇಡಿಯೋ ಪಾರ್ಕ್‍ನಿಂದ ಸಂತ ಜೋಸೆಫರ ಪ್ರೌಢಶಾಲೆ ಮೂಲಕ ಬೆಳಗಲ್ ಕ್ರಾಸ್‍ನ ಮಾರ್ಗವಾಗಿ ಕೌಲ್‍ಬಜಾರ್ ಪೊಲೀಸ್ ಠಾಣೆ, ಮೊದಲ ರೈಲ್ವೇ ಗೇಟ್ ಮೂಲಕ ಜೋಳದರಾಶಿ ರಂಗಮಂದಿರದಿಂದ ಮೋತಿ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿತು.
18 ವರ್ಷ ಪೂರೈಸಿದ ಎಲ್ಲಾ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿ, ಮತದಾರರ ಪಟ್ಟಿಯ ಮಾಹಿತಿ ತಿದ್ದುಪಡಿಗಾಗಿ ನಮೂನೆ 8 ಬಳಸಿ, ಬಂದಿತು, ಬಂದಿತು ಚುನಾವಣೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಸರು ನೊಂದಾಯಿಸುವುದು ನಮ್ಮೆಲ್ಲರ ಹೊಣೆ, ನಿಮ್ಮ ಹೆಸರು ನೋಂದಾಯಿಸಲು ನಮೂನೆ-6 ಬಳಸಿ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು, ಚುನಾವಣಾ ಸಂಬಂಧಿತ ಸಂದೇಹಗಳಿಗೆ 1950 ಮತದಾರರ ಸಹಾಯವಾಣಿಗೆ ಕರೆಮಾಡಿ ಎಂಬ ಘೋಷವಾಕ್ಯಗಳು ಕಂಡುಬಂದವು.