ಮತದಾನ ಜಾಗೃತಿಗಾಗಿ ರಂಗೋಲಿ ಸ್ಪರ್ದೆ ; ಬಹುಮಾನ ವಿತರಣೆ

oppo_0

ತಾಳಿಕೋಟೆ:ಏ.18: ತಾಲೂಕಾ ಸ್ವೀಪ್ ಸಮಿತಿ, ಪುರಸಭೆ ತಾಳಿಕೋಟೆ ಇವರ ಸಹಯೋಗದಲ್ಲಿ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಾಗೃತಿಗಾಗಿ ಪಟ್ಟಣದ ರಾಜವಾಡೆಯ ಶ್ರೀ ಶಿವಭವಾನಿ ಮಂದಿರದಲ್ಲಿ ಬುಧವಾರರಂದು ರಂಗೋಲಿ ಸ್ಪರ್ದೆಯನ್ನು ಆಯೋಜಿಸಲಾಗಿತ್ತು.
ಈ ರಂಗೋಲಿ ಸ್ಪರ್ದೆಯಲ್ಲಿ 50 ಕ್ಕೂ ಹೆಚ್ಚು ಜನ ಮಹಿಳೆಯರು ಪಾಲ್ಗೊಂಡು ಮತದಾನ ಕುರಿತಂತೆ ಹಲವಾರು ರಂಗೋಲಿಗಳನ್ನು ಬಿಡಿಸಿದರಲ್ಲದೇ ಈ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ಇಬ್ಬರು ಪಡೆದುಕೊಂಡರು. ವರ್ಷಾ ವಿಠ್ಠಲ ಮಹೇಂದ್ರಕರ, ಐಶ್ವರ್ಯ ಗಂಗಾಧರ ಕಂಬಾರ ಪ್ರಥಮ ಸ್ಥಾನ ಪಡೆದುಕೊಂಡರೆ ಗೀತಾ ಬಸವರಾಜ ಛಾಂದಕೋಟೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಇನ್ನೂಳಿದಂತೆ ರಂಗೋಲಿ ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನೋಟಬುಕ್ ಮತ್ತು ಪೆನ್ನುಗಳನ್ನು ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ ಅವರು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮೋಹನ್ ಜಾಧವ, ಕಚೇರಿ ವ್ಯವಸ್ಥಾಪಕ ಏಸು ಬೆಂಗಳೂರ, ಶಿಕ್ಷಣ ಇಲಾಖೆಯ ರಾಜು ವಿಜಾಪೂರ, ಶ್ರೀಪಾದ ಜೋಶಿ, ಶಿವಾನಂದ ಜುಮನಾಳ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ಶಂಕರಗೌಡ ಶಿವರಾಜ, ವಾರ್ಡ ಬಿಎಲ್‍ಓಗಳಾದ ಶ್ರೀಮತಿ ನೀಲಮ್ಮ ಪಾಟೀಲ, ಸರೋಜಾ ಸಿಂಪಗೇರ, ಮಹಾದೇವಿ ಕೇರೂಟಗಿ, ಕಸ್ತೂರಿ ಸ್ಥಾವರಮಠ, ಸುವರ್ಣಾ ಅಲೇಗಾವಿ, ಆರತಿ ಜಾನಕರ, ಮೊದಲಾದವರು ಉಪಸ್ಥಿತರಿದ್ದರು.