ಮತದಾನ ಕುರಿತ ಜಾಗೃತಿ ತರಬೇತಿ: ವಿಕಲಚೇತನರಿಂದ ಹೆಚ್ಚಿನ ಮತದಾನದ ಅರಿವು ಮೂಡಿಸಲು ಕರೆ

ಕಲಬುರಗಿ:ಫೆ.05:ದೈಹಿಕ ಅಂಗವಿಕಲರಿಗೆ, ಶ್ರವಣದೋಷ ಉಳ್ಳವರಿಗೆ ಹಾಗೂ ದೃಷ್ಠಿದೋಷ ಇರುವ ವಿಕಲಚೇತನರಿಗೆ ಮತದಾನ ಕೇಂದ್ರಕ್ಕೆ ಕರೆತರಲು ಕಾರ್ಯಕರ್ತರು ಕೈಗೊಳ್ಳಬೇಕಾದ ಸಿದ್ಧತೆಗಳು ಹಾಗೂ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಮತದಾನ ಮಾಡುವಂತೆ ಸ್ಥಳೀಯ ಮಟ್ಟದಲ್ಲಿ ಜಾಗೃತಿ ನಡೆಸುವುದು ಅಗತ್ಯವಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಸಾದಿಕ್ ಹುಸೇನ್ ಖಾನ್ ಅವರು ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಳಾ ಸ್ವೀಪ್ ಸಮಿತಿ ವತಿಯಿಂದ ಮುಂಬರುವ ಲೋಕಸಭಾ ಚುನಾವಣೆಯ ಅಂಗವಾಗಿ ವಿಕಲಚೇತನರ ಇಲಾಖೆಯ 286 ಕಾರ್ಯಾಕರ್ತರಿಗೆ ವಿಕಲಚೇತನರಿಗೆ ಮತ್ತು ಹಿರಿಯ ನಾಗರೀಕರಿಗೆ ಮತದಾನ ಕೇಂದ್ರ ಸಿಗುವ ಸೇವಾ ಸೌಲಭ್ಯಗಳ ಕುರಿತು ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತರಬೇತಿ ಕಾರ್ಯಾಗಾರದಲ್ಲಿ ದೃಷ್ಠಿದೋಷ ಉಳ್ಳ ಶಿಕ್ಷಕರ ಸ್ನ್ಯಾಪ್ ಚಾಟ್ ವಿಡಿಯೋ ತುಣುಕುಗಳ ಮೂಲಕ ಮತ್ತು ಮುಕ ಅಭಿನಯದ ಶಿಕ್ಷಕರಿಂದೆ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಕುರಿತು ವಿಶೇಷ ವಿಡಿಯೋ ತುಣುಗಳ ಚಿತ್ರಿಕರಿಸಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಾಕರ್ತರು ಕಾರ್ಯಾನಿರ್ವಹಿಸಬೇಕು ಎಂದು ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 286 ಜನ ವಿಆರ್‍ಡಬ್ಲು,ಎಂಆರ್‍ಡಬ್ಲು, ಯುಆರ್‍ಡಬ್ಲು ಕಾಯ9ಕತ9ರಿಗೆ ಹಂತ ಹಂತವಾಗಿ ಭಾರತ ಚುನಾವಣಾ ಆಯೋಗದಿಂದ ವಿಕಲಚೇತನರಿಗೆ ಮತ್ತು ಹಿರಿಯ ನಾಗರೀಕರಿಗೆ ಮತದಾನ ದಿನದಂದು ಮತ್ತು ಮತದಾನ ಕೇಂದ್ರಗಳಲ್ಲಿ ಸಿಗುವ ಸೇವಾ ಸೌಲಭ್ಯಗಳು, ಸಕ್ಷಮ್ ಮೊಬೈಲ್ ಆಪ್, ವೋಟರ್ ಹೆಲ್ಫ್ ಲೈನ್ (ವಿಎಚ್‍ಎ) ಮೊಬೈಲ್ ಆಪ್, ವಿಕಲಚೇತನ ಯುವ ಮತದಾರರ ನೊಂದಣಿ, ಫಾರಂ ನಂ-6 ನೊಂದಣಿ, ಚುನಾವಣಾ ಕತ9ವ್ಯಗಳ ನಿವ9ಹಣೆ ಬಗ್ಗೆ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.