ಮತದಾನ ಕುರಿತು ಜಾಗೃತಿ

ಬೆಂಗಳೂರು,ಏ.೧೯:ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ, ಜಿ.ಕೆ.ವಿ.ಕೆ. ಆವರಣದಲ್ಲಿ “ಮತದಾನ ಕುರಿತು ಜಾಗೃತಿ”ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕುಲಪತಿಗಳು ಡಾ. ಎಸ್.ವಿ. ಸುರೇಶ, ಮಾತನಾಡಿ ಮತದಾನ ಅತ್ಯಂತ ಪವಿತ್ರ ಕಾರ್ಯವಾಗಿದ್ದು ಸದೃಢ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಮತದಾರರ ಸಹಭಾಗಿತ್ವ ಅತ್ಯಗತ್ಯ. ಪ್ರತಿಯೊಬ್ಬ ನಾಗರೀಕನು ತಪ್ಪದೇ ಮತದಾನ ಮಾಡಬೇಕು, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆಮಾಡುವುದರಿಂದ ದೇಶದ ದಿಕ್ಕನ್ನು ಪ್ರಗತಿಪರ ಹಾದಿಯಲ್ಲಿ ಅಭಿವೃದ್ಧಿಯತ್ತ ಸಾಗಿಸಬಹುದು. ಮತದಾರರು ಜಾತಿ, ಹಣ ಮುಂತಾದ ಆಮಿಷಗಳಿಗೆ ಒಳಗಾಗದೆ ಸೂಕ್ತ ಅಭ್ಯರ್ಥಿಗೆ ಮತ ನೀಡಬೇಕು. ಯುವಕರೇ ದೇಶದ ಬೆನ್ನೆಲುಬಾಗಿರುವುದರಿಂದ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
, ಬಿ.ಬಿ.ಎಂ.ಪಿ, ಉಪ ಆಯುಕ್ತರು ಬಿ.ಕೆ. ಮಮತ, ಮತ್ತು ಕೃ.ವಿ.ವಿ, ಬೆಂಗಳೂರಿನ ಅಧಿಕಾರಿಗಳು ಉಪಸ್ಥಿತರಿದ್ದರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಬೀದಿನಾಟಕ, ಡೊಳ್ಳು ಕುಣಿತ, ನೃತ್ಯ ಮತ್ತು ಹಾಡುಗಳ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.