ಮತದಾನ ಕಡ್ಡಾಯವಾಗಿ ಮಾಡಿ : ದೀಪಿಕಾ ಬಿ ನಾಯ್ಕರ್

ಹುಮನಾಬಾದ :ಎ.6: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಗ್ರಾಮದ ಸಾರ್ವಜನಿಕರಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ದೀಪಿಕಾ ಬಿ ನಾಯ್ಕರ್ ತಿಳಿಸಿದರು.
ತಾಲೂಕಿನ ಹುಡಗಿ ಹಾಗೂ ನಂದಗಾಂವ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ (ಸ್ವೀಪ್) ಅಭಿಯಾನದಲ್ಲಿ ಮಾತನಾಡಿದ ಅವರು, 18
ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಮತದಾನವನ್ನು ಮಾಡಬಹುದಾಗಿದೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡು, ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಆದ್ಯ ಕರ್ತವ್ಯ. ಯಾವುದೇ ಕಾರಣಕ್ಕೆ ಮತದಾನದಿಂದ ದೂರ ಉಳಿಯಬಾರದು ಎಂದು ಹೇಳಿದರು.
ಚುನಾವಣೆ ಆಯೋಗ ಮತದಾನದ ಹಕ್ಕು ಸಮರ್ಪಕವಾಗಿ ಕಲ್ಪಿಸುವ ಉದ್ದೇಶದಿಂದ 80 ವರ್ಷ ಮೇಲ್ಪಟ್ಟವರಿಗೆ, ಅನಾರೋಗ್ಯ, ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇದರ ಸದುಪಯೋಗವನ್ನು ಸಂಬಂಧಪಟ್ಟವರು ಪಡೆದುಕೊಂಡು
ಮತ ಚಲಾಯಿಸಬೇಕೆಂದು ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಅಧಿಕಾರಿ ಮಲ್ಲಿಕಾರ್ಜುನ ಸಾಗರ್, ಐಇಸಿ ಸಂಯೋಜಕ ಉಮೇಶ ಮಲಗಿ,ಹುಡಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಲ್ಲಪ್ಪ, ನಂದಗಾಂವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗಯ್ಯ ಸ್ವಾಮಿ ಇದ್ದರು.