ಮತದಾನ ಅರಿವು ಕಾರ್ಯಕ್ರಮ

ಕಲಬುರಗಿ,ಮೇ.5-ನಗರದ ರೇಷ್ಮೆ ಮಹಾವಿದ್ಯಾಲಯದ ಅಡಿಯಲ್ಲಿ ನಡೆಯುತ್ತಿರುವಂತ ಶ್ರೀ ಮುರಘರಾಜೇಂದ್ರ ಸ್ವಾಮೀಜಿ ಬಿ.ಎಡ್ ಮತ್ತು ಎಂ. ಇಡಿ ಕಾಲೇಜಿನ ವಿದ್ಯಾರ್ಥಿಗಳಿಂದ ಹಾಗೂ
ಕುಸನೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಕುಸನೂರ ಗ್ರಾಮದಲ್ಲಿ ಮತದಾನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.್ತ
ಮತದಾನದ ಜಾಗೃತಿಗೆ ಸಂಬಂಧಿಸಿದಂತೆ ಘೋಷ ವಾಖ್ಯೆಗಳು ಹೇಳುವುದರ ಮೂಲಕ ಮತದಾನದ ಮಹತ್ವ ಮತ್ತು ಮತ ಚಲಾಯಿಸುವ ಹಕ್ಕಿಗೆ ಸಂಬಂಧಿಸಿದಂತೆ ಕಿರು ನಾಟಕ ಪ್ರದರ್ಶನದ ಮೂಲಕ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ರೇಷ್ಮಿ ಶಿಕ್ಷಣ ಸಂಸ್ಥೆ ಐಕ್ಯೂಎಸಿ ಸಂಯೋಜಕಿ ಗೀತಾ ಆರ್.ಎಂ., ಕುಸನೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೇಮಾ ದೇಶಮುಖ್, ಪ್ರಾಚಾರ್ಯ ಡಾ.ರಾಜಶೇಖರ್ ಸಿರವಾಳಕರ್, ಡಾ.ಓಂಪ್ರಕಾಶ್ ಎಚ್.ಎಂ., ಶರಣಪ್ಪ ಚವ್ಹಾಣ್, ಅನಿಲ್ ಜಾಧವ್, ಸಂಧ್ಯಾ ಅಶೋಕ ಗುತ್ತೇದಾರ, ಕುಮಾರಿ ಪ್ರಭಾವತಿ ಶ್ರೀಶೈಲ ಮಠಪತಿ, ಶ್ರೀಶೈಲ್ ಹಳ್ಳೆ, ರಾಜೇಶ ಸಿ.ಪಿ., ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.