
ಬೆಂಗಳೂರು,ಮೇ.10- ರಾಜ್ಯದಲ್ಲಿ ಮುಕ್ತಾಯವಾದ 224 ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ 5 ಪ್ರಮುಖ ಸಮೀಕ್ಷೆಗಳು ಅಂತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದಿದೆ.
5 ಸಮೀಕ್ಷೆಗಳ ಪೈಕಿ ಮೂರಲ್ಲಿ ಕಕಾಂಗ್ರೆಸ್ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಒಂದರಲ್ಲಿ ಬಿಜೆಪಿ ಮುನ್ನೆಡೆ ಸಾಧಿಸಿದೆ.ಮತ್ತೊಂದರಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದ್ದು ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗುವ ಸಾದ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ಐದು ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಅಂತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದು ಭವಿಷ್ಯ ನುಡಿದಿವೆ ಅವುಗಳಲ್ಲಿ ಬಹುಪಾಲು ಕಾಂಗ್ರೆಸ್‌ಗೆ ಸ್ವಲ್ಪ ಲಾಭವಾಗಲಿದೆ ಎಂದು ಭವಿಷ್ಯ ನುಡಿದಿವೆ.
ಎಚ್‌ಡಿ ಕುಮಾರಸ್ವಾಮಿ ಅವರ ಜನತಾ ದಳ ಮತ್ತೆ ಕಿಂಗ್‌ಮೇಕರ್ ಆಗುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ. 224 ಸ್ಥಾನಗಳ ವಿಧಾನಸಭೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆಯಲು 113 ಸ್ಥಾನ ಪಡೆಯಬೇಕಾಗಿದೆ.
ಒಂದರಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಜಿದ್ದಾಜಿದ್ದಿ
ಕೇವಲ ಒಂದು ಮತಗಟ್ಟೆ ಸಮೀಕ್ಷೆ -ಜೀ ನ್ಯೂಸ್ , ಮ್ಯಾಟ್ರಖ್ ಸಂಸ್ಥೆಯು ಕಾಂಗ್ರೆಸ್‌ಗೆ 118 ರ ಗರಿಷ್ಠ ಸಂಖ್ಯೆ ದಾಟಬಹುದು ಎಂದು ಹೇಳಿದೆ. ಊಹಿಸಿದೆ. ಮತ್ತೊಬ್ಬರು ಬಿಜೆಪಿಗೆ 117ರ ಗರಿಷ್ಠ ಸಂಖ್ಯೆ ಪಡೆಯಬಹುದು ಭವಿಷ್ಯ ನುಡಿದಿವೆ.
ಯಾವಾವ ಸಮೀಕ್ಷೆ: ಯಾರಿಗೆ ಮುಂಚೂಣಿ
ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಸಮೀಕ್ಷೆಯಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿ 224 ವಿಧಾನಸಭಾ ಸ್ಥಾನಗಳಲ್ಲಿ 85-100, ಕಾಂಗ್ರೆಸ್ 94-108 ಮತ್ತು ಜೆಡಿಎಸ್ 24-32 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ಟಿವಿ9- ಭಾರತ್ ವರ್ಷ – ಪೊಲ್ ಸ್ಟಾರ್ಟ್ ಬಿಜೆಪಿಗೆ 88-98 ಸ್ಥಾನಗಳು, ಕಾಂಗ್ರೆಸ್‌ಗೆ 99-109 ಸ್ಥಾನಗಳು ಮತ್ತು ಜೆಡಿಎಸ್‌ಗೆ 21-26 ಸ್ಥಾನಗಳನ್ನು ಭವಿಷ್ಯ ನುಡಿದಿದೆ.
ಝೀ ನ್ಯೂಸ್ ಮ್ಯಾಟ್ರಿಜ್ ಬಿಜೆಪಿಗೆ 79-94 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 103-118 ಸ್ಥಾನಗಳು ಮತ್ತು ಜೆಡಿಎಸ್‌ಗೆ 25-33 ಸೀಟುಗಳನ್ನು ಭವಿಷ್ಯ ನುಡಿದಿದೆ.
ಸುವರ್ಣ ನ್ಯೂಸ್-ಜನ್ ಕಿ ಬಾತ್ ಬಿಜೆಪಿಗೆ 94 ರಿಂದ 117 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ನೀಡಿದೆ. ಕಾಂಗ್ರೆಸ್ 91-106 ಸ್ಥಾನಗಳನ್ನು ಮತ್ತು ಜೆಡಿಎಸ್ 14-24 ಸ್ಥಾನಗಳನ್ನು ಪಡೆಯಲಿದೆ ಎಂದು ಅದು ಹೇಳಿದೆ.