ಮತದಾನವೇ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಸಾಧನ

ದೇವದುರ್ಗ,ಮೇ.೦೧- ದೇಶದ ೧೮ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗಳು ಸಂವಿಧಾನ ಅಮೂಲ್ಯವಾದ ಮತದಾನ ಹಕ್ಕು ನೀಡಿದೆ. ಮತದಾನವೇ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಸಾಧನವಾಗಿದೆ ಎಂದು ಚುನಾವಣಾಧಿಕಾರಿ ಎಂ.ಎನ್.ಚೇತನಕುಮಾರ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮ ಹಾಗೂ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಪ್ರತಿಯೊಬ್ಬರು ಮೇ ೧೦ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಕಡ್ಡಾಯವಾಗಿ ಮತದಾನ ಮಾಡಬೇಕು. ಆಸೆ, ಆಮಿಷಗಳಿಗೆ ಒಳಗಾಗಬಾರದು. ಈ ವರ್ಷ ೮೦ವರ್ಷ ತುಂಬಿದ ಮತದಾರರು ಮನೆಯಲ್ಲೆ ಕುಳಿತು ವೋಟ್ ಹಾಕಲು ಅವಕಾಶ ಕಲ್ಲಿಸಲಾಗಿದೆ ಎಂದು ಹೇಳಿದರು.
ನಂತರ ನೌಕರರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಾಪಂ ಇಒ ಪಂಪಾಪತಿ ಹಿರೇಮಠ, ಸಹಾಯಕ ನಿರ್ದೇಶಕ ಬಸಣ್ಣ ನಾಯಕ, ಬಿಇಒ ಸುಖದೇವ್, ಟಿಎಚ್‌ಒ ಡಾ.ಬನದೇಶ್ವರ, ಬಂದೋಲಿ ಸಾಬ್, ಸಂಗಪ್ಪ, ಮಲ್ಲಿಕಾರ್ಜುನ, ಮದ್ವರಾಜ್, ಅಮರೇಶ, ಪ್ರದೀಪ್, ಮಾರ್ಕಂಡಯ್ಯ ಇತರರಿದ್ದರು.
ಜಾಗೃತಿ ರಥ:
ಪಟ್ಟಣದ ತಾಪಂ ಕಚೇರಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ತಯಾರಿಸಿದ ಮತದಾನ ಜಾಗೃತಿ ರಥಕ್ಕೆ ತಾಪಂ ಇಒ ಪಂಪಾಪತಿ ಹಿರೇಮಠ ಚಾಲನೆ ನೀಡಿದರು. ರಥ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಜೆಪಿ ವೃತ್ತ, ಮಿನಿವಿಧಾನಸೌಧ, ಬಸವೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತದ ಮೂಲಕ ವಿವಿಧ ಬಡಾವಣೆಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.