ಮತದಾನದ ಹಕ್ಕು ತಪ್ಪದೇ ಚಲಾಯಿಸಿ

ಭಾಲ್ಕಿ:ಮಾ.2:ಸಂವಿಧಾನದತ್ತವಾಗಿ ಲಭಿಸಿರುವ ಮತದಾನದ ಹಕ್ಕನ್ನು
ಮತದಾರರು ತಪ್ಪದೇ ಮತ ಚಲಾಯಿಸಬೇಕು ಎಂದು ನೋಡಲ್ ಅಧಿಕಾರಿ ಸೂರ್ಯಕಾಂತ ಬಿರಾದಾರ ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವೀಪ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾರೊಬ್ಬರೂ
ಮತ ಚಲಾಯಿಸದೇ ಅದರ ಅಪಮೌಲ್ಯ ಮಾಡಬಾರದು.

ದೇಶದ ಆಡಳಿತ ಚುಕ್ಕಾಣಿ ಯಾರು ಹಿಡಿಯಬೇಕು ಎಂದು ನಿರ್ಧರಿಸುವ ಶಕ್ತಿ ಮತದಾನಕ್ಕಿದ್ದು,
ತುಂಬಾ ವಿವೇಚನೆಯಿಂದ ಅಮೂಲ್ಯ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ತಿಳಿ ಹೇಳಿದರು
ರು.

ಪ್ರಭಾರಿ ಪ್ರಾಚಾರ್ಯ
ರಘುನಂದ, ಉಪನ್ಯಾಸಕರಾದ ರವಿ ಮೇಟಿ,
ಹೇಮಾವತಿ ಪಾಟೀಲ, ಕೃಷ್ಣಮೂರ್ತಿ, ಕಮಲಾಬಾಯಿ, ಅಶೋಕ ಚೆಲ್ವಾ, ಧನರಾಜ ಟೋಕರೆ ಇದ್ದರು.