ಮತದಾನದ ಹಕ್ಕು ಚಲಾಯಿಸಿ:ಪಿ.ಎನ್ ಲೋಕೇಶ್

ದಾವಣಗೆರೆ.ಮಾ.17; ಪ್ರತಿ ಮತದಾರರಿಗೂ ಮತದಾನದ  ಹಕ್ಕು ಪ್ರಾಮುಖ್ಯತೆ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯಲ್ಲಿ ನೂರಷ್ಟು ಮತದಾನಕ್ಕೆ ಎಲ್ಲರೂ ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಅಪರ ಜಿಲ್ಲಾಧಿಕಾರಿ ಪಿ. ಎನ್ ಲೋಕೇಶ್ ಎಂದು ಹೇಳಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಕನ್ನಡ ಭವನದಲ್ಲಿ ನಡೆದ ಮತದಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಗಾಗಿ ಮಾದರಿ ಮತಗಟ್ಟೆ ಕೇಂದ್ರಗಳನ್ನು ರಚಿಸಿ, ವಿದ್ಯುನ್ಮಾನ ಮತ ಯಂತ್ರ ಮತ್ತು ಮತದಾನ ಚಲಾಯಿಸುವ ವಿಧಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ವಿವಿ ಪ್ಯಾಟ್ ಬಳಕೆ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಮತದಾರರಲ್ಲಿ ಚುನಾವಣಾ ಪ್ರಕ್ರಿಯೆ ಪಾರದರ್ಶಕ ಚುನಾಚಣೆ ಕುರಿತಂತೆ ಅರಿವಿ ಮೂಡಿಸಲಾಗುತ್ತಿದೆ. ಮತದಾರರು ಮತದಾನದ ಪ್ರಾತ್ಯಕ್ಷಿತೆಯಲ್ಲಿ ಭಾಗವಹಿಸಿ ವಿದ್ಯನ್ಮಾನ ಮತ್ರಯಂತ್ರದಲ್ಲಿ ಅಣುಕು ಮತ ಚಲಾವಣೆ ಮಾಡುವಂತೆ ಮನವಿ ಮಾಡಿಕೊಂಡರು.ಬ್ಯಾಲೆಟ್ ಪೇಪರ್ ಬದಲಿಗೆ ಇವಿಎಂ ಮತಯಂತ್ರಗಳ ಬಳಕೆ ಹೇಗೆ ಮಾಡಲಾಗುತ್ತೆ. ಮತದಾನ ಖಾತ್ರಿ ಯಂತ್ರವಾದ ವಿವಿಪ್ಯಾಟ್ ಯಾವ ರೀತಿ ಕೆಲಸ ನಿರ್ವಹಿಸುತ್ತೆ. ಮತದಾನ ಮಾಡಿದ ನಂತರ ತಾವು ಬಯಸಿದ ಅಭ್ಯರ್ಥಿಗೆ ಮತ ಹೋಗಿದೆ ಎಂಬುದನ್ನು ಯಾವ ರೀತಿ ವಿವಿಪ್ಯಾಟ್ ಖಚಿತಪಡಿಸುತ್ತದೆ ಎಂಬುದನ್ನು ಜನರಿಗೆ ತಿಳಿಸಲಾಗುತ್ತಿದೆ.ಪ್ರಾತ್ಯಕ್ಷಿಕೆಗಾಗಿ ಅಗತ್ಯ ಡೆಮ್ಮಿ  ಮತ ಯಂತ್ರ, ವಿವಿ ಪ್ಯಾಟ್‍ಗಳನ್ನು ಆಯೋಗ ಒದಗಿಸಿದೆ. ಮತದಾನದ ಬಳಿಕ ಪ್ರತಿದಿನ ಮತದಾನದ ಯಂತ್ರಗಳನ್ನು ಅಗತ್ಯ ಭದ್ರತೆಯೊಂದಿಗೆ ಮಾದರಿ ಭದ್ರತಾ ಕೊಠಡಿಯಲ್ಲಿರಿಸಲಾಗುವುದು. ಇದಕ್ಕಾಗಿ ಅಗತ್ಯವಿರುವ ಎಲ್ಲ ಹಂತದ ಸಿಬ್ಬಂದಿ, ಸೆಕ್ಟರ್ ಹಾಗೂ ಇತರೆ ಅಧಿಕಾರಿಗಳನ್ನು ಆಯೋಗದ ಮಾರ್ಗಸೂಚಿಯಂತೆ ನಿಯೋಜಿಸಲಾಗಿದೆ. ಒಟ್ಟಾರೆ ನೈಜ ಮತದಾನದಂತೆ ಎಲ್ಲ ಪ್ರಕ್ರಿಯೆಗಳ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಾಮದೇವಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಕಾರ್ಯಕ್ರಮದ ಸೆಕ್ಟರ್ ಅಧಿಕಾರಿಯಾಗಿ ಪ್ರಾಧ್ಯಾಪಕರಾದ ಡಾ. ರಾಘವೇಂದ್ರ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.