ಮತದಾನದ ಹಕ್ಕನ್ನು ತಪ್ಪದೆ ಚಲಾಯಿಸಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.14 :-  ಸಂವಿಧಾನಿಕ  ಪ್ರಜಾಪ್ರಭುತ್ವದ ಮತದಾನದ ಹಕ್ಕನ್ನು ಪ್ರತಿಯೊಬ್ಬ ಮತದಾರರು  ತಪ್ಪದೆ ಚಲಾಯಿಸಿ ಎಂದು ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹಾಗೂ ಚುನಾವಣಾ ಪಟ್ಟಣ ಪಂಚಾಯತಿ ಎಂಸಿಸಿ ತಂಡದ ಅಧ್ಯಕ್ಷ ಫಿರೋಜ್ ಖಾನ್ ಮತದಾರರಲ್ಲಿ ಮನವಿ ಮಾಡಿದರು.
ಅವರು ಕಳೆದ ಸಂಜೆ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ನಗರದ ಮನೆಮನೆಗೆ ತೆರಳಿ ಕಳೆದ ಬಾರಿ ನಗರದಲ್ಲಿ ಕಡಿಮೆ ಮತದಾನವಾಗಿದ್ದು ಈ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ 18 ತುಂಬಿದ ಯುವಕರು ಮತದಾರ ಪಟ್ಟಿಯಲ್ಲಿ ತಪ್ಪದೆ ಹೆಸರು  ನೋಂದಾಯಿಸಿಕೊಳ್ಳಬೇಕು ಹಾಗೂ ಅಂಬೇಡ್ಕರ್ ನಗರದ ಪ್ರತಿಯೊಬ್ಬ ಮತದಾರರು ಸಹ ತಪ್ಪದೆ ತಮ್ಮ ಮತದಾನದ ಹಕ್ಕನ್ನು ತಪ್ಪದೆ ಚಲಾಯಿಸಿ ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯತಿ ಕಿರಿಯ ಆರೋಗ್ಯ ನಿರೀಕ್ಷಕಿ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯ ಚುನಾವಣಾ ಎಂಸಿಸಿ ತಂಡದ ಸದಸ್ಯೆ ಗೀತಾ ವಿಜೇತ್ ಮಾತನಾಡಿ ಪ್ರತಿಯೊಬ್ಬ ಮಹಿಳಾ ಮತದಾರರು ಮತಗಟ್ಟೆಗೆ ತೆರಳಿ ನಿಮ್ಮ ಅಮೂಲ್ಯವಾದ ಮತದಾನ ಹಕ್ಕನ್ನು ತಪ್ಪದೆ ಚಲಾಯಿಸಿ ದೇಶದ ಏಳ್ಗೆಗೆ ಶ್ರಮಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಚುನಾವಣಾ ವಿಷಯ ನಿರ್ವಾಹಕ ರಮೇಶ, ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ, ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿವರ್ಗ ಮನೆಮನೆಗೆ ತೆರಳಿ ಮತದಾನ ಜಾಗೃತಿ ಮೂಡಿಸುವಲ್ಲಿ  ಮುಂದಾಗಿದ್ದರು.