ಮತದಾನದ ವೇಳೆ ಕಿಡಿಗೇಡಿಗಳಿಂದ ಅಭ್ಯರ್ಥಿ ಮೇಲೆ ಮಾರಣಾಂತಿಕ ಹಲ್ಲೆ

ಮಂಡ್ಯ : ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ವ್ಯಕ್ತಿಗಳಿಬ್ಬರು ಅಭ್ಯರ್ಥಿ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಪಾಂಡವಪುರ ತಾಲೂಕು, ಮೇಲುಕೋಟೆ ಬಳಿಯ ಎಂ. ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಮ್ಮಣ್ಣ ಎಂಬುವರೇ ಹಲ್ಲೆಯಿಂದ ಗಾಯಗೊಳಗಾದ ಅಭ್ಯರ್ಥಿ. ಅದೇ ಗ್ರಾಮದ ಎಸ್.ಆರ್. ಲೋಕೇಶ ಹಾಗೂ ನಂಜೇಗೌಡ ಅವರು ಹಲ್ಲೆ ನಡೆಸಿದ್ದಾರೆ.
ಮತದಾನದ ವೇಳೆ ಮತಕೇಂದ್ರದ ಬಳಿ ಬಂದ ಅಭ್ಯರ್ಥಿ ತಮ್ಮಣ್ಣ ಅವರ ತಲೆಗೆ ಅದೇ ಗ್ರಾಮದ ಲೋಕೇಶ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದರು. ಬಳಿಕ ನಂಜೇಗೌಡ ಎಂಬುವರೂ ಸಹ ತಮ್ಮಣ್ಣ ಅವರ ಮೇಲೆ ಹಲ್ಲೆ ನಡೆಸಿದರು.
ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ಅಧೀಕ್ಷ ಕೆ. ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಬೀಡು ಬಿಟ್ಟಿದ್ದು, ಪರಿಸ್ಥಿತಿ ಅವಲೋಕಿಸುತ್ತಿದೆ. ಈ ಸಂಬಂಧ ಮೇಲುಕೋಟೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.