ಮತದಾನದ ಮೌಲ್ಯ ಪ್ರತಿಯೊಬ್ಬರು ಅರಿತುಕೊಳ್ಳಿ-ಡಾ.ಜೆ.ಎಲ್ ಈರಣ್ಣ

ಸಂಜೆವಾಣಿ ವಾರ್ತೆ
ಮಾನ್ವಿ.ಜ.೨೮- ಸರಕಾರಿ ಪ್ರಥಮ ದರ್ಜೆ ಕಾಲೇಜಿ ಮಾನ್ವಿಯಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆಯ ಕೋಶದ ವತಿಯಿಂದ ಇಂದು ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೆ.ಎಲ್ ಈರಣ್ಣ ರವರು ವಿದ್ಯಾರ್ಥಿಗಳು ಮತದಾನದ ಮಹತ್ವವನ್ನು ಅರಿತು ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಭಾಗವಹಿಸುವ ಇಚ್ಛಾಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ತಿಳಿಸಿದರು.
ಮಹಾನ್ ನಾಯಕರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಹಾಗೂ ಆಂತರಿಕ ಗುಣಮಟ್ಟ ಭರವಸೆಯ ಕೋಶ ಸಂಯೋಜಕರಾದ ಡಾ. ರಾಘವೇಂದ್ರ ಸಹಾಯಕ ಪ್ರಾಧ್ಯಾಪಕರು ಇವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪವಿತ್ರವಾದ ಮತವನ್ನು ಯಾವುದೇ ರೀತಿಯ ಆಸೆ ಆಕಾಂಕ್ಷಗಳಿಗೆ. ಅಮಿಷಗಳಿಗೆ. ಮಾರಿಕೊಳ್ಳದೆ ನಿರ್ಭಯವಾಗಿ ಸ್ವತಂತ್ರವಾಗಿ ಮತದಾನ ಮಾಡುವ ದಿಟ್ಟತನವನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು ಅದೇ ರೀತಿಯಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜ್ ಕರಡಿಗುಡ್ಡ ಇವರು ಮಾತನಾಡಿ ರಾಷ್ಟ್ರೀಯ ಮತದಾನದ ಮಹತ್ವ, ಯುವಕರ ಪಾತ್ರ, ನಡೆದು ಬಂದ ಹಾದಿಯ ಸಂಪೂರ್ಣ ವಿವರಣೆಯನ್ನು ತಿಳಿಸಿದರು ಅಲ್ಲದೆ ಇಲ್ಲಿಯವರೆಗೂ ೧೩ ರಾಷ್ಟ್ರೀಯ ಯುವ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಜೊತೆಗೆ ತಮ್ಮ ಅಮೂಲ್ಯವಾದ ಮತವನ್ನು ನಿಯತಕಾಲಿಕ ಚುನಾವಣೆಗಳಲ್ಲಿ ನಿಷ್ಪಕ್ಷಪಾತವಾಗಿ ಪಾರದರ್ಶಕತೆಯಿಂದ ಸ್ವಾಹಿತಾಸಕ್ತಿಯಿಂದ ಭಾಗವಹಿಸಿ ಮತದಾನ ಮಾಡುವಂತೆ ಸಮುದಾಯಕ್ಕೆ ಪ್ರೇರಣೆ ಆಗಬೇಕೆಂದು ತಿಳಿಸಿದರು. ೨೦೧೧ ರಿಂದ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್‌ರವರ ನೇತೃತ್ವದಲ್ಲಿ ಮೊದಲ ಬಾರಿಗೆ ಮತದಾನ ದಿವಸವನ್ನು ಆಚರಣೆ ಮಾಡಲಾಯಿತು. ಇಂದಿಗೆ ೧೩ನೇ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಆಚರಣೆ ಮಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುದೊಡ್ಡದಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಅಂಬಿಕಾ ಹಾಗೂ ನಿರೂಪಣೆಯನ್ನು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶರಣಬಸವ ಬೆಟ್ಟದೂರ್ ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ್ ಚಿಗರಿ ಅರ್ಥಶಾಸ್ತ್ರ ಉಪನ್ಯಾಸಕರು ರಮ್ಯಾ ಇಂಗ್ಲಿಷ್ ಉಪನ್ಯಾಸಕರು ರುಮಾನ ಗಣಿತಶಾಸ್ತ್ರ ಉಪನ್ಯಾಸಕರು ಅಲ್ಲದೆ ಕಾಲೇಜಿನ ಸಿಬ್ಬಂದಿಗಳು ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.