ಬೀದರ, ಏ. 07: ಕಳೆದ ಬಾರಿ ಕೆಲವರ ನಿರ್ಲಕ್ಷ್ಯತೆ ಹಾಗೂ ವಯೋವೃದ್ದ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಮತದಾನ ಮಾಡದಿರುವ ಕಾರಣ ಮತದಾನ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ ಯಾರು ಮತದಾನದ ಬಗ್ಗೆ ನಿರ್ಲಕ್ಷ್ಯತೆ ತೊರದೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವಿಪ್ ಸಮಿತಿಯ ನೋಡಲ್ ಅಧಿಕಾರಿ ಶಿಲ್ಪಾ .ಎಂ ಹೇಳಿದರು .
ಅವರು ಗುರುವಾರ ಬೀದರ ತಾಲೂಕಿನ ಅಮಲಾಪುರ ಹಾಗೂ ಚಿಟ್ಟಾ ಗ್ರಾಮಗಳ್ಳಿ ಹಮ್ಮಿಕೊಂಡಿದೆ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗವು ಮತದಾನ ಪ್ರಮಾಣ ಹೆಚ್ಚುಸಲು ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಬಾರಿ 80 ವರ್ಷಕಿಂತ ಹೆಚ್ಚಿನ ವಯೋವೃದ್ದರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದಿದ್ದವರ ಮನೆಗೆ ಮತಗಟ್ಟೆ ಅಧಿಕಾರಿಗಳು ತೆರಳಿ ಮತದಾನ ಪಡೆಯುವ ಯೋಜನೆ ಜಾರಿಗೆ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಮತಗಟ್ಟೆಗಳ್ಳಲ್ಲಿ ರ್ಯಾಂಪ,ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆ ಇದಲ್ಲಿ ಅವುಗಳನ್ನು ಸರಿಪಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿದರು.
ರಾಜ್ಯ ಮಟ್ಟದ ಚುನಾವಣಾ ಮಾಸ್ಟರ ಟ್ರೇನರ್ ಡಾ.ಗೌತಮ ಅರಳಿ ಮಾತನಾಡಿ, ಕಳೆದ ಬಾರಿಯ ಚುನಾವಣೆಯಲ್ಲಿ ಅಮಲಾಪುರ್ ಹಾಗೂ ಚಿಟ್ಟಾ ಗ್ರಾಮಗಳಲ್ಲಿ ಒಟ್ಟು ನೊಂದಾಯಿತ ಮತದಾರಲ್ಲಿ ಕೇವಲ 55 ಪ್ರತಿಶತ ಮತದಾರರು ಮಾತ್ರ ಮತದಾನ ಮಾಡಿದ್ದಾರೆ. ಮೇಲ್ನೋಟಕ್ಕೆ ಇದಕ್ಕೆ ನಿರ್ಲಕ್ಷ್ಯತೆಯೇ ಕಾರಣವೆಂದು ತಿಳಿದು ಬಂದಿದ್ದು ಈ ಬಾರಿ ಯಾರು ನಿರ್ಲಕ್ಷ್ಯತೆಯನ್ನು ತೊರಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಜಗನಾಥ ಮೂರ್ತಿ, ತಾಲ್ಲೂಕ ಪಂಚಾಯತ ಕಾರ್ಯನಿರ್ವಕ ಅಧಿಕಾರಿ ಮಾಣಿಕರಾವ್ ಪಾಟೀಲ್, ನರೇಗಾ ಸಹಾಯಕ ನಿರ್ದೇಶಕರು ಲಕ್ಷ್ಮಿ ಬಿರಾದಾರ್, ಚಿಟ್ಟ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಗರೆಡ್ಡಿ, ಅಮಲಾಪೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಂಕರರಾವ್, ಬೀದರ ತಾಲ್ಲೂಕ ಪಂಚಾಯತಿ ಸಿಬ್ಬಂದಿಗಳಾದ ಸುನೀತಾ ರೆಡ್ಡಿ, ರಮೇಶ್ ಚಟ್ನಹಳ್ಳಿ, ಸಂಜೀವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.