ಮತದಾನದ ಬಗ್ಗೆ ಜಾಗೃತಿ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 4: ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಮತ ಹಾಕಬಾಕು, ಅಲ್ಲದೆ ಮತಯಂತ್ರದಲ್ಲಿ ಮತದಾನ ಯಾವ ರೀತಿ ಹಾಕಬೇಕು, ಅಧಿಕಾರಿಗಳು ಮತಯಂತ್ರವನ್ನು ಬಳಕೆಯ ಪೂರ್ಣ ಮಾಹಿತಿ ಹಾಗೂ ಅಣುಕು ಮತದಾನ ಪ್ರಕ್ರಿಯೆಯನ್ನು ನಡೆಸುವ ಮೂಲಕ ಜಾಗೃತಿಯನ್ನು ಉಂಟುಮಾಡಲಾಯಿತು ಎಂದು ಪುರಸಭೆಯ ಮುಖ್ಯಾಧಿಕಾರಿ ಖಾಜಾ ಸಾಬ್ ತಿಳಿಸಿದರು.
ಅವರು ಪಟ್ಟಣದ ಪುರಸಭೆಯ ಅವರಣದಲ್ಲಿ ಎಲ್ಲಾ ಸದಸ್ಯರ ಸಾಮಾನ್ಯ ಸಭೆಯು ಮುಗಿದ ಸಂದರ್ಭದಲ್ಲಿ ಎಲ್ಲಾ ಸದಸ್ಯರಿಗೆ, ಸಾರ್ವಜನಿಕರಿಗೆ ಈ ಮಾಹಿತಿನೀಡಿ ಅಣುಕು ಮತದಾನ ಹಾಗೂ ಮತಯಂತ್ರದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳಾದ ಪ್ರಭುರಾಜ್ ಹಗರಿ, ಅನ್ನಪೂರ್ಣ, ಶಿವರಂಜಿನಿ, ಹಾಗೂ ಪುರಸಭೆಯ ಅಧ್ಯಕ್ಷೆ ಅನಿತಾ ವಸಂತಕುಮಾರ್, ಸದಸ್ಯರುಗಳು, ಉಪಾಧ್ಯಕ್ಷ ಈರೇಶ್ ಸಿಂಧೆ ಇತರರು ಉಪಸ್ಥಿತರಿದ್ದರು.