ಮತದಾನದ ಬಗ್ಗೆ ಅರಿವು ಮೂಡಿಸಿ : ಡಿಸಿ ಕರೆ

ಹುಮನಾಬಾದ :ಏ.20: ಮೇ 7ನೇ ದಿನಾಂಕದಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಎಂದು ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.
ಪಟ್ಟಣದಲ್ಲಿ ಗುರುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲಾ ಆಡಳಿತ ಮತ್ತು ಸೀಪ್ ಸಮಿತಿ ಹಾಗೂ ತಾಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಸೀಪ್ ಸಮಿತಿ ತೇರ ಮೈದಾನದಲ್ಲಿ ಹಮ್ಮಿಕೊಳ್ಳಲಾದ (ಮತದಾನ ಜಾಗೃತಿ) ವಾಕಥಾನ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ ಚುನಾವಣೆ ಗಿಂತ ಈ ಸಲ ಹೆಚ್ಚಿನ ಮತದಾನ ಆಗಬೇಕು, ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ ಬದೋಲೆ ಸರ್ ಅವರು ಮಾತನಾಡಿ,18 ವರ್ಷ ಮೇಲ್ಪಟ್ಟವರು ಮತದಾನ ಮಾಡುವ ಹಕ್ಕನ್ನು ಪಡೆದುಕೊಂಡಿದ್ದು ಹಾಗೂ 18 ವರ್ಷ ತುಂಬಿದ ಪ್ರತಿಯೊಬ್ಬರು ಕೂಡ ಮತದಾನ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಮತದಾನವನ್ನು ಮಾಡಲು ಅವಕಾಶವಿದ್ದು ಇದರ ಒಂದು ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.
ಚುನಾವಣಾ ಅಬಜ್ವರ್ ದೀಪಾಂಕರ್ ಮಹಾಪಾತ್ರ ಅವರು ಮಾತನಾಡಿ, ನೀವು ಮತದಾನ ಮಾಡುವುದರ ಜೊತೆಗೆ ನಿಮ್ಮ ಅಕ್ಕ ಪಕ್ಕದವರೆಗೂ ಹಾಗೂ ವಲಸೆ ಹೋದ ಜನರಿಗೂ ಕೂಡ ಮತದಾನದ ಮಹತ್ವವನ್ನು ತಿಳಿಸಿ ಅವರಿಗೂ ಕೂಡ ಮತದಾನ ಮಾಡುವ ಸಲುವಾಗಿ ಉತ್ತೇಜಿಸಬೇಕು. ಭಾರತ ಸಂವಿಧಾನ ನಮ್ಮಗೆ ನೀಡಿರುವ ಹಕ್ಕು ಪ್ರಜಾಪ್ರಭುತ್ವದ ಏಳಿಗೆಗಾಗಿ ಉತ್ತಮ ಪ್ರಜೆಯನ್ನು ಆಯ್ಕೆ ಮಾಡಿಕೊಳ್ಳುವುದಕೋಸ್ಕರ ನಾವೆಲ್ಲರೂ ನಮ್ಮ ಎಲ್ಲ ಕೆಲಸಗಳನ್ನೂ ಬದಿಗಿಟ್ಟು ಮೇ 7ನೇ ತಾರೀಕಿನಂದು ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಚನ್ನಬಸವ ಎಸ್.ಎಲ್.ಸರ್ ಅವರು ಮಾತನಾಡಿ, ಯಾವುದೇ ಆವೇಶಗಳಿಗೆ ಒಳಗಾಗದೆ ಮತದಾನವನ್ನು ಮಾಡುವುದರ ಜೊತೆಗೆ ತಮ್ಮ ಅಕ್ಕ ಪಕ್ಕದವರಿಗು ಕೂಡ ಮತದಾನದ ಅರಿವು ಮೂಡಿಸಿ ಅವರನ್ನು ಕೂಡಮತಗಟ್ಟೆಗೆ ಕರೆದುಕೊಂಡು ಬಂದು ಮತದಾನವನ್ನು ಮಾಡಿಸಬೇಕೆಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ತರಬೇತಿದಾರರು ಡಾ.ಗೌತಮ ಅರಳಿ , ತಹಶೀಲ್ದಾರ ಅಂಜುಂ ತಬಸುಮ್ ,ತಾಲೂಕು ಪಂಚಾಯತ ಕಾರ್ಯನಿರ್ವಕ ಅಧಿಕಾರಿ ಶಿವಲೀಲಾ ,ಸಹಾಯಕ ನಿರ್ದೇಶಕರಾದ (ನರೇಗಾ) ಜಗನ್ನಾಥ್ , ಪೆÇಲೀಸ್ ಇಲಾಖೆಯ ಅಧಿಕಾರಿಗಳು,ಎಸ್‍ಬಿಎಂ ಐಇಸಿ ಸಂಯೋಜಕ ಪಂಡಿತ ವಾಡೇಕರ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಸಿಬ್ಬಂದಿಗಳು ಭಾಗಿಯಾಗಿದ್ದರು