ಮತದಾನದ ಜಾಗೃತಿ ರ್‍ಯಾಲಿ

ರಾಯಚೂರು,ಮೇ.೦೬- ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಬಿ.ಆರ್.ಬಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಅವರ ಆದೇಶದಂತೆ ಮತದಾನ ಜಾಗೃತಿ ರ್‍ಯಾಲಿಯನ್ನು ಬಿ.ಆರ್.ಬಿ. ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ದಿಂದ ಹಮ್ಮಿಕೊಳ್ಳಲಾಗಿತ್ತು. ರ್‍ಯಾಲಿಯು ಬಿ.ಆರ್.ಬಿ ವೃvದಿಂದ ಶಶಿಮಹಲ್ ವೃತ್ತದವರೆಗೆ ಹಾಗೂ ಇತರ ಬಡಾವಣೆಗಳ ಮುಖಾಂತರ ಸಾಗಿ ಬಿ.ಆg
.ಬಿ. ವೃತ್ತದಲ್ಲಿ ಮತದಾನ ಪ್ರತಿಜ್ಞೆ ವಿಧಿಯನ್ನು ಬೋಧಿಸುವುದರ ಮೂಲಕ ಮುಕ್ತಾಯವಾಯಿತು.
ಎನ್.ಸಿ.ಸಿ. ಅಧಿಕಾರಿಗಳಾದ ಲೆಫ್ಟಿನೆಂಟ್ ತಿಪ್ಪಣ್ಣ ಪ್ರತಿಜ್ಞೆ ವಿಧಿಯನ್ನು ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಭಾರಿ ಪ್ರಾಚಾರ್ಯರಾದ ಶ್ರೀಮತಿ ಪೂಜಿತ ಕೆ, ಎನ್.ಎಸ್.ಎಸ್. ಸಂಯೋಜಕರಾದ ಡಾ. ಶ್ಯಾಮ ಗಾಯಕವಾಡ್, ನ್ಯಾಕ್ ಸಂಯೋಜಕರಾದ ಶ್ರೀ ಸಂದೀಪ ಕಾರಭಾರಿ, ಶ್ರೀ ಸಂಪತ ಅಂಗಡಿ ವಿ, ಬೋಧಕ-ಬೋಧಕೇತರ ವರ್ಗದವರು ಮತ್ತು ಎನ್.ಎಸ್.ಎಸ್. ಸ್ವಯಂ ಸೇವಕರು ಭಾಗವಹಿಸಿದ್ದರು.