
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ಯುವಮತದಾರರು ಸೇರಿದಂತೆ ಮತಹೊಂದಿದ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡುವ ಮೂಲಕ ತಮ್ಮ ಇಚ್ಛೆಯ ಸರ್ಕಾರವನ್ನು ತಾವೇ ರಚನೆಮಾಡಿ ಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ -2023ರ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಮ್ಮ ಮತ ನಮ್ಮ ಹಕ್ಕು, ನಮ್ಮ ಸಂವಿಧಾನ ನಮ್ಮ ಮತದಾನ ಮುಂತಾದ ಘೋಷಣೆಗಳನ್ನು ಮಕ್ಕಳಿಂದ ಕೂಗಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಬಸಮ್ಮ ಹಾಗೂ ಸಣ್ಣ ಗಂಗಮ್ಮ ಡೊಳ್ಳು ಬಾರಿಸಿ ಚಾಲನೆ ನೀಡಿದರು.
ಬಿ.ಎಲ್.ಓ ಗಳಾದ ವಿ.ಬಸವರಾಜ, ಮೋದಿನ್ ಸಾಬ್,ಶಿಕ್ಷಕರಾದ ಮುನಾವರ ಸುಲ್ತಾನ,ಸುಧಾ, ಶ್ವೇತಾ, ಉಮ್ಮೆಹಾನಿ, ಶಶಮ್ಮ ಹಾಗೂ ಶಾಲಾ ಶಿಕ್ಷಕವೃಂದ,ಯುವಮತದಾರರು ಪಾಲ್ಗೊಂಡಿದ್ದರು.