ಮತದಾನದ ಜಾಗೃತಿಯೊಂದಿಗೆ ಆರೋಗ್ಯ ಮಾಹಿತಿ

ಮಾನ್ವಿ,ಮೇ.೦೯- ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಜಿಲ್ಲಾಡಳಿತ, ಆರೋಗ್ಯ, ಪಂಚಾಯತ, ಇಲಾಖೆಯಿಂದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಜಾಗೃತಿಯ ಜೊತೆಗೆ ಮತದಾನದ ಮಹತ್ವವನ್ನು ಜನರಿಗೆ ತಿಳಿಸಿದರು.
ಮೇ ಹತ್ತರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಮಹತ್ವ ಹಾಗೂ ಅರಿವು ಮೂಡಿಸಿ ಜಾಗೃತಿ ಮಾಡಲಾಯಿತು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ತಿಳಿಸಿದರು. ನಂತರ ಸಮುದಾಯ ಆರೋಗ್ಯ ಅಧಿಕಾರಿ ಮಹೇಶ ಮಾತಾನಾಡಿ ಕ್ಯಾನ್ಸರ್, ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ನಂತರ ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಯಂಕಮ್ಮ ನಾಳೆ ಮೇ ೧೦ನೇ ದಿನಾಂಕದಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ. ತಮ್ಮ ಮತಗಟ್ಟೆಯಲ್ಲಿ ಹೋಗಿ ತಮ್ಮ ಸಂವಿಧಾನ ಬದ್ಧ ಹಕ್ಕನ್ನು ಚಲಾಯಿಸಬೇಕು ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಮತದಾನ ಕಾರ್ಯದಲ್ಲಿ ಭಾಗವಹಿಸಿ ಮತದಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಅಂಜನಮ್ಮ, ಅಶಾ ಕಾರ್ಯಕರ್ತರು ತಾಯಿಂದಿರು ಸಾರ್ವಜನಿಕರು ಹಾಜರಿದ್ದರು.