ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.26: ಕಳೆದ 9 ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷ ಬಂದ ನಂತರ ಇದೀಗ ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸಂಪೂರ್ಣವಾದ ಮೂಲಭೂತ ಸೌಲಭ್ಯಗಳು ಜನಸಾಮಾನ್ಯರಿಗೆ ಸಿಗುತ್ತಿದೆ, ಇದಕ್ಕೆ ಕಾರಣ ಅರವಿಂದ್ ಕೇಜ್ರಿವಾಲ್ ಅವರ ಸ್ಥಾಪಿಸಿದ ಆಮ್ ಆದ್ಮಿ ಪಕ್ಷ ಇದೀಗ ನಮ್ಮ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ದ ಪೊರಕೆಯ ಗುರುತಿಗೆ ಮತದಾನ ಮಾಡುವ ಮುಖಾಂತರ ಎಲ್ಲಾ ಸಮಸ್ಯೆಗಳಿಗೆ ಪೊರೆಕೆಯೇ ಪರಿಹಾರ ಎನ್ನುವ ಸಂದೇಶವನ್ನು ಸಾರುವ ಬನ್ನಿ ಕೈಜೋಡಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಭ್ರಷ್ಟಾಚಾರ ಮುಕ್ತ ಕರ್ನಾಟಕವನ್ನು ನಿರ್ಮಿಸೋಣ. ಇದರ ಅಂಗವಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವಿವಿಧ ವೃತ್ತಗಳಲ್ಲಿ ಇಂದು ಮತದಾನ ಜಾಗೃತಿಯ ಬೀದಿ ನಾಟಕಗಳನ್ನು ಇಂದಿನಿಂದ ಎರಡು ದಿನಗಳ ಕಾಲ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಇಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಪ್ರಬಲ ಆಕಾಂಕ್ಷಿ ಕೆ.ಎರ್ರಿಸ್ವಾಮಿ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತದಾನ ಜಾಗೃತಿ ಮೂಡಿಸುತ್ತಾ, ಮತದಾನವೆಂಬುದು ಪ್ರಜಾಪ್ರಭುತ್ವದಲ್ಲಿ ಬಹಳಷ್ಟು ಮಹತ್ವ ಪಡೆದುಕೊಂಡಿದ್ದು, ಇದನ್ನು ಮತದಾರರು ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೇ ನಿಷ್ಠಾವಂತ ಪಕ್ಷ ಮತ್ತು ವ್ಯಕ್ತಿಗಳನ್ನು ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡುವ ಮುಖಾಂತರ ಆಯ್ಕೆ ಮಾಡಿಕೊಂಡು ಭ್ರಷ್ಟಾಚಾರ ಮುಕ್ತ ಕರ್ನಾಟಕ, ಸಮಗ್ರ ಬಳ್ಳಾರಿ ನಗರ ಅಭಿವೃದ್ಧಿ ಮತ್ತು ಧೂಳು ಮುಕ್ತ ಬಳ್ಳಾರಿಯನ್ನು ಮಾಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಅರವಿಂದ ಕೆಜ್ರಿವಾಲ್ ರವರ ಭರವಸೆಯಂತೆ ರೈತರ ಸಂಪೂರ್ಣ ಸಾಲ ಮನ್ನಾ, ವಿಶ್ವದರ್ಜೆಯಲ್ಲಿ ಉಚಿತ ಶಿಕ್ಷಣ, ವೈದ್ಯಕೀಯ ಸೇವಾ ಸೌಲಭ್ಯ, ಪ್ರತಿ ಮನೆಗೆ ಉಚಿತ ವಿದ್ಯುತ್, ಕುಡಿಯುವ ನೀರು, ಪ್ರತಿ ಮೊಹಲ್ಲೆಗೆ ಮೊಹಲ್ಲಾ ಕ್ಲೀನಿಕ್, ನಿರುದ್ಯೋಗ ಯುವಕರಿಗೆ ರೂ. 3000/- ಭತ್ಯೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅತ್ಯುತ್ತಮ ರಸ್ತೆ ಹಾಗೂ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳ ಜೊತೆಗೆ ಸ್ಥಳೀಯ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ, ಭ್ರಷ್ಟಾಚಾರ ಮುಕ್ತ ಕರ್ನಾಟಕವನ್ನು ನಿರ್ಮಿಸಲು ಪಣ ತೊಟ್ಟಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಟಿ.ಕಿರಣ್ ಕುಮಾರ್ ಮಾತನಾಢುತ್ತಾ, ನಮ್ಮದು ನುಡಿದಂತೆ ನಡೆಯುವ ಪಕ್ಷ, ದೆಹಲಿ ಮತ್ತು ಪಂಜಾಬ್‍ನಲ್ಲಿ ಚುನಾವಣಕ್ಕೂ ಮುಂಚೆ ನೀಡಿರುವ ಎಲ್ಲಾ ಭರವಸೆಗಳನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತದಾನ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ವಿ.ಬಿ.ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಪಂಪನಗೌಡ ಫಯಾಜ್ ಭಾಷ, ಹಸೇನ್, ಸುಹೈಲ್ ಭಾಷ್, ಚಕ್ರದರ್, ಮಹಿಬ್, ನಾಸಿರ್, ಇಲಿಯಾಸ್, ಮುಶ್ರತ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
One attachment • Scanned by Gmail