
ಮಾನ್ವಿ,ಏ.೩೦- ಪೋತ್ನಾಳ ಗ್ರಾ.ಪಂ, ಸಿಡಿಪಿಓ, ಶಿಕ್ಷಣ, ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ನಮ್ಮ ನಡೆ ಮತಗಟ್ಟೆಯ ಕಡೆಗೆ ಎನ್ನುವ ಅಭಿಯಾನವನ್ನು ಧ್ವಜಾರೋಹಣವನ್ನು ಮಾಡಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಖ್ತರ್ ಪಾಷ ನೆರವೇರಿಸಿದರು.
ನಂತರ ಮಾತನಾಡಿದ ಅವರು ಮೇ ೧೦ ರಂದು ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮಹತ್ವವನ್ನು ನಾವು ಅರಿಯಬೇಕಾಗಿದೆ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರ ಮೂಲಕ ಸಂವಿಧಾನಕ್ಕೆ ಗೌರವಿಸಬೇಕಾಗಿದೆ ಎಂದರು.
ನಂತರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತಾನಾಡಿ ಮತದಾನದ ಮಹತ್ವದ ಕುರಿತು ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಯಲ್ಲಪ್ಪ, ರವಿಚಂದ್ರನ್, ಸಿದ್ಧಯ್ಯ ಸ್ವಾಮಿ,ನಾಗರಾಜ, ಶಿವರಾಜ ಗುಜ್ಜಲ್, ಸೇರಿದಂತೆ ಅಂಗನವಾಡಿ, ಆಶಾ, ಶಾಲೆ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಇದ್ದರು.