ಮತದಾನದಿಂದ ದೂರ ಉಳಿಯದಿರಿ

ದೇವದುರ್ಗ,ಏ.೨೭- ಮೇ ೧೦ರಂದು ಜರುಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎಂದು ತಾಪಂ ಎಇ ಬಸಣ್ಣ ನಾಯಕ ಹೇಳಿದರು.
ತಾಲೂಕಿನ ಭೂಮನಗುಂಡ ಗ್ರಾಪಂಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ತಾಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಗ್ರಾಪಂಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಮಂಗಳವಾರ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಮತದಾನ ಪವಿತ್ರವಾದ ಕಾರ್ಯವಾಗಿದೆ. ಸಂವಿಧಾನ ದೇಶದ ೧೮ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನ ಹಕ್ಕು ನೀಡಿದೆ. ಅದನ್ನು ಉತ್ತಮರಿಗೆ ಚೆಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದರು.
ನಂತರ ನರೇಗಾ ಕೂಲಿಕಾರರಿಗೆ ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಂತರ ಕೂಲಿಕಾರರ ಆರೋಗ್ಯ ತಾಪಸಣೆ ಮಾಡಲಾಯಿತು. ಸಂಯೋಜಕ ಅಮರೇಶ, ಮಹಮ್ಮದ್ ರಫಿ, ಪಿಡಿಒ ವೆಂಕಟೇಶ, ಸಾಗರ, ಸುಭಾಷ್, ಅಂಜಿನೇಯ, ಸದ್ದಾಂ ಇತರರಿದ್ದರು.