ಮತದಾನಕ್ಕೆ ಪ್ರೇರೇಪಣೆ

ಲಕ್ಷ್ಮೇಶ್ವರ,ಏ23: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಎಲ್ಲ ವಾರ್ಡಗಳಿಗೆ ಜಾಥಾ ಮೂಲಕ ತೆರಳಿ ಮೇ 10 ರಂದು ಪ್ರಜಾಪ್ರಭುತ್ವದ ಹಬ್ಬದ ಕರ್ನಾಟಕ ವಿಧಾನಸಭೆ ಚುನಾವಣೆ -2023 ಕ್ಕೆ ತಪ್ಪದೆ ಮತದಾನ ಮಾಡಲು ಪ್ರೇರೇಪಿಸಲಾಯಿತು ಹಾಗೂ ಮತದಾರ ಪ್ರತಿಜ್ಞಾ ವಿಧಿ ಭೋದಿಸಲಾಯಿತು ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಓ ಆದ ಪಿ.ಎಚ್. ಗೂಣಿಮ್ಮನವರ ಕಾರ್ಯದರ್ಶಿರಾದ ವಾಯ್.ಬಿ. ಮಾದರ ಹಾಗೊ ಗ್ರಾಮ ಪಂ ಸಿಬ್ಬಂದಿ, ಎನ್.ಎಂ.ಆರ್.ಎಲ್. ಸ್ವ ಸಹಾಯ ಸಂಘದ ಮಹಿಳಾ ಸದಸ್ಯರು ಹಾಗೂ ಗ್ರಾಮದ ಮತದಾರರು ಹಾಜರಿದ್ದರು.