ಮತದಾನಕ್ಕೆ ಕ್ಷಣಗಣನೆ – ಮತಗಟ್ಟೆಯೆತ್ತ ನೇಮಕಗೊಂಡ ಮತಗಟ್ಟೆ ಸಿಬ್ಬಂದಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ. 9 :- ತಾಲೂಕಿನ 245 ಮತಗಟ್ಟೆಗಳಲ್ಲಿ ನಾಳೆ ನಡೆಯುವ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಇದ್ದು ಇಂದು ಚುನಾವಣೆಗೆ ನೇಮಿಸಿದ ಸಿಬ್ಬಂದಿಗಳು ಆಯಾ ಮತಗಟ್ಟೆಯತ್ತ ನೇಮಿಸಿರುವ ಬಸ್ಸುಗಳಲ್ಲಿ ತೆರಳಿದರು.
ಪಿಆರ್ ಓ, ಎಪಿಆರ್ ಓ, ಪಿಓ 1, ಪಿಓ 2 ಸೇರಿದಂತೆ 245 ಮತಗಟ್ಟೆಗಳಿಗೆ 980 ಚುನಾವಣಾ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ಇವರುಗಳಿಗೆ ಸಹಾಯಕರಿಗೆ ಓರ್ವ ಡಿ ಗ್ರೂಪ್, ಬಂದೋಬಸ್ತ್ ಗೆ ಓರ್ವ ಪೊಲೀಸ್ ಮತ್ತು ಒಬ್ಬ ಬಾರ್ಡರ್ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇವರನ್ನು ಕರೆದೊಯ್ಯಲು 54 ಬಸ್ಸುಗಳನ್ನು ಬಳಸಿಕೊಳ್ಳಲಾಗಿದೆ. 196ಮಂದಿಯನ್ನು ರಿಸರ್ವ್ ನಲ್ಲಿಡಲಾಗಿದೆ ಎಂದು ಚುನಾವಣಾಧಿಕಾರಿ ಈರಣ್ಣ ಬಿರಾದಾರ್ ತಿಳಿಸಿದ್ದಾರೆ. ಶಾಂತಿಯುತ ಮತದಾನಕ್ಕೆ ಹಾಗೂ ತಪ್ಪದೆ ಮತದಾನದ ಹಕ್ಕನ್ನು ಚಲಾಯಿಸುವಂತೆ  ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.