
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,9 ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಇಂದು ಕಚೇರಿಯಲ್ಲಿ ಚುನಾವಣೆಯ ಸಿದ್ದತೆಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮತದಾನಕ್ಕಾಗಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 1222 ಮತಗಟ್ಟೆ ಸ್ಥಾಪಿಸಿದೆಂದು ತಿಳಿಸಿದರು.
ಇವುಗಳಲ್ಲಿ 1106 ಸರ್ಕಾರಿ ಕಟ್ಟಡಗಳಲ್ಲಿ ಉಳಿದವು ಖಾಸಗಿ ಕಟ್ಟಡಗಳಲ್ಲಿ ಮಾಡಲಾಗಿದೆ.
ಒಟ್ಟು ಮತಗಟ್ಟೆಗಳಲ್ಲಿ 295 ಸೂಕ್ಷ್ಮ, 73 ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 700 ಮತಗಟ್ಟೆಗಳಲ್ಲಿ ವೀಡಿಯೋ ಕ್ಯಾಮರಾ ಜೊತೆಗೆ ಹೆಚ್ಚಿನ ಭದ್ರತೆ ಇರತ್ತೆ ಇಲ್ಲಿ ಸೆಂಟ್ರಲ್ ಪ್ಯಾರಾ ಮಿಲಿಟರಿ ಪೋರ್ಸ್ ನಿಯೋಜನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರತ ಮತಗಟ್ಟೆಯಲ್ಲಿ ಮೂಲಭೂತ ಸೌಲಭ್ಯದ ವ್ಯವಸ್ಥೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ 11,40,899
ಪುರುಷ – 5,61,718, ಮಹಿಳೆ – 5,79,012
ಲಿಂಗತ್ವ ಅಲ್ಪ ಸಂಖ್ಯಾತರು – 169 ಹಾಗು 39 ಸಾವಿರ ಯುವ ಮತದಾರರು ಈ ಬಾರಿ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆಂದರು.
ಚುನಾವಣೆ ದಿನ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು 5716 ಸಿಬ್ಬಂದಿ ನೇಮಿಸಲಾಗಿದೆ. ಸಿಬ್ಬಂದಿ ಹಾಗೂ ವಸ್ತುಗಳ ಸಾಗಾಟಕ್ಕೆ 316 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಪ್ರತೀ ಕ್ಷೇತ್ರದಲ್ಲಿ ತಲಾ ಎರಡು ಪಿಂಕ್ ಪೊಲಿಂಗ್ ಬೂತ್ ಗಳನ್ನ ಮಾಡಲಾಗಿದೆಂದರು. ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮೇ 10 ರಂದು ಮತದಾನನಡೆಯಲಿದ್ದು. ಅದಕ್ಕೂ ಮುನ್ನ ಮಾಕ್ ಪೋಲಿಂಗ್ ನಡೆಯಲಿದೆಂದರು.
ಮತದಾನಮುಗಿಯುವ 48 ತಾಸುಗಳ ಮುನ್ನ ಅಂದರೆ ಮೇ 8 ರ ಸಂಜೆ 6 ಕ್ಕೆ ಬಹಿರಂಗ ಪ್ರಚಾರ ಮುಗಿಯಲಿದೆ. ನಂತರ ಅಭ್ಯರ್ಥಿಗಳು ಬೇಕಾದರೆ ಮನೆ ಮನೆ ಪ್ರಚಾರ ಮಾಡಬಹುದುದೆಂದರು.