ಮತಚಲಾಯಿಸಿದ ನವದಂಪತಿಗಳು

ತಾಳಿಕೋಟೆ:ಮೇ.11:ಕರ್ನಾಟಕ ವಿಧಾನ ಸಭಾ ಚುನಾವಣೆಯ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಂಬಂದಿಸಿ ತಾಳಿಕೋಟೆ ಪಟ್ಟಣದ ಮತಗಟ್ಟೆಗೆ ಮಧುವೆಯ ಹೊಸ್ತಿಲಲ್ಲಿದ್ದ ನವದಂಪತಿಗಳು ಒಟ್ಟಿಗೆ ಆಗಮಿಸಿ ಮೊದಲಭಾರಿಗೆ ಮತಚಲಾಯಿಸಿ ಸಂತಸ ಹಂಚಿಕೊಂಡರು.

ನವ ದಂಪತಿಗಳಾದ ಶ್ರೀಮತಿ ನೀಲಮ್ಮ ಶರಣಗೌಡ ಬಿರಾದಾರ ಇವರ ದ್ವಿತೀಯ ಸುಪುತ್ರಿ ರಕ್ಷೀತಾ ಹಾಗೂ ಶ್ರೀಮತಿ ಶಂಕುಂತಲಾ ಅಮರಪ್ಪಗೌಡ ಬಿರಾದಾರ ಇವರ ಸುಪತ್ರ ಶರಣಬಸ ಅವರ ವಿವಾಹವು ತಾಳಿಕೋಟೆಯ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಮದ್ಯಾಹ್ನದ ವರೆಗೆ ಮಧುವೆಯ ಕಾರ್ಯ ಮುಗಿದ ನಂತರ ನವದಂಪತಿಗಳು ಬಸ್ ನಿಲ್ದಾಣದ ಹತ್ತಿರ ಸರ್ಕಾರಿ ಕನ್ನಡ ಗಂಡು ಮಕ್ಕಲ ಶಾಲೆಯ ಮತಗಟ್ಟೆ ನಂ.21ರಲ್ಲಿ ಒಟ್ಟಿಗೆ ಆಗಮಿಸಿ ಮತದಾನದ ಹಕ್ಕನ್ನು ಸಲಾಯಿಸಿದರಲ್ಲದೇ ಪ್ರಜಾಪ್ರಭುತ್ವದಡಿ ಮೊದಲಭಾರಿಗೆ ಮತಚಲಾಯಿಸಿರುವದು ಸಂತಸತಂದಿದೆ ಎಂದರು.