ಮತಗಳು ಖರೀದಿಗೆ ತಿಲಾಂಜಲಿ ಇಡಿ

ಕೋಲಾರ,ಏ,೨೯:ಚುನಾವಣೆಯಲ್ಲಿ ಹಣ ಚೆಲ್ಲಿ ಮತಗಳನ್ನು ಖರೀದಿ ಮಾಡಲು ಬಂದಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್‌ರನ್ನು ಬೆಂಬಲಿಸುವಂತೆ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮನವಿ ಮಾಡಿದರು.
ತಾಲೂಕಿನ ಮುದುವತ್ತಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಪರವಾಗಿ ಪ್ರಚಾರ ನಡೆಸಿ ಮಾತನಾಡಿ, ಹಣವೇ ಮಾನದಂಡದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಬಂದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಕ್ಷೇತ್ರದ ಜನತೆ ಸ್ವಾಭಿಮಾನದ ಮೂಲಕ ಉತ್ತರ ಕೊಡಬೇಕು ಹಣ ಕೊಟ್ಟ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನಕ್ಕೆ ತಿಲಾಂಜಲಿ ಇಡಬೇಕು ಎಂದು ಮನವಿ ಮಾಡಿದರು
ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ ಎರಡು ಪಕ್ಷವು ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ನಾನು ಎಂಎಲ್ಸಿಯಾಗಿದ್ದು ಅನುದಾನ ಕಡಿಮೆ ನನ್ನೊಂದಿಗೆ ಸಿಎಂಆರ್ ಶ್ರೀನಾಥ್‌ರನ್ನು ಶಾಸಕರಾಗಿ ಕಳಸಿದ್ದೇ ಆದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ವಿಧಾನಸೌಧದಲ್ಲಿ ನಿಮ್ಮಗಳ ಧ್ವನಿಯಾಗಿ ಮಾತನಾಡಲು ಸಾಧ್ಯವಾಗುತ್ತದೆ ಕೊರೊನಾ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಹಾಗೂ ಅವರ ತಂಡ ಮನೆ ಬಾಗಿಲಿಗೆ ಔಷಧೀ ಕಿಟ್ ತರಕಾರಿಗಳು ಆಹಾರ ಧಾನ್ಯಗಳನ್ನು ನೀಡುವ ಮೂಲಕ ನಿಮ್ಮಗಳ ಕಷ್ಟಗಳಿಗೆ ಸ್ಪಂದಿಸಿದ್ದಾರೆ ನಿಮ್ಮ ಮನೆಮಗನಾಗಿರುವ ಇಂತಹ ವ್ಯಕ್ತಿಗೆ ನಿಮ್ಮ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು
ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ, ಜನಪರ ಆಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಜೆಡಿಎಸ್ ಪಕ್ಷಕ್ಕ ಮತ ಹಾಕಿಸುವಂತೆ ಮನವಿ ಮಾಡಿದರು.
ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ತಾಪಂ ಮಾಜಿ ಸದಸ್ಯ ಪಾಲಾಕ್ಷಗೌಡ, ಯುವ ಮುಖಂಡ ರಾಜು ಶ್ರೀನಿವಾಸಪ್ಪ, ಮುದವತ್ತಿ ಗ್ರಾಪಂ ಮಾಜಿ ಅಧ್ಯಕ್ಷ ಈರೇಗೌಡ, ರಮೇಶ್, ಎಸ್.ಕೃಷ್ಣಪ್ಪ, ಮುಖಂಡರಾದ ಶ್ರೀನಿವಾಸ್, ಜೆಟ್ ಅಶೋಕ್, ರಾಜಣ್ಣ, ಸೊಸೈಟಿ ಆನಂದ್, ನಾರಾಯಣಸ್ವಾಮಿ ಇದ್ದರು.