ಮತಗಟ್ಟೆ ಸಿಬ್ಬಂದಿ ನಿಧನ

ಕೊಟ್ಟೂರು, ಡಿ.28: ತಾಲೂಕಿನ ಗ್ರಾಮಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಕರ್ತವ್ಯಕ್ಕಾಗಿ ದೂಪದಹಳ್ಳಿ ಗ್ರಾಮ ಪಂಚಾಯಿತಿಯ ಬೇವೂರು ಕ್ಷೇತ್ರದ ನೀಯೋಜಿಸಿದ ಪಿ.ಆರ್.ಒಅಧಿಕಾರಿಯಾದ ಪ್ರಕಾಶತೆಲಗಿ ಚುನಾವಣೆಯ ಸಮಯದಲ್ಲಿ ಮೃತಪಟ್ಟಘಟನೆ ನಡೆದಿದೆ.
ಭಾನುವಾರ ಚುನಾವಣೆಯ ಸಮಯದಲ್ಲಿ ಅಸ್ವಸ್ಥಗೊಂಡಿದ್ದು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೇರಿಗೆ ಕರೆಯ್ದದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಿಸಲಾಗುವುದು ಎಂದು ತಹಶೀಲ್ದಾರ ಗೋಠೋರ ಹೇಳಿದರು