ಮತಗಟ್ಟೆ ಅಧಿಕಾರಿಗಳ‌ ತರಬೇತಿ ಕಾರ್ಯಗಾರ 


ಸಂಜೆವಾಣಿ ವಾರ್ತೆ
ಗಂಗಾವ, ಏ.16 ವಿಧಾನಸಭಾ ಚುನಾವಣೆ ಹಿನ್ನಲೆ ನಗರದ ಲಯನ್ಸ್ ಶಾಲೆಯಲ್ಲಿ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಾಗಾರ ನಡೆಯಿತು. ಸಹಾಯಕ ಚುನಾವಣಾ ಅಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಮಾತನಾಡಿ, ವಿಧಾನ ಸಭಾ ಚುನಾವಣೆ ಹಿನ್ನಲೆ‌ ಇಂದು ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮತದಾನದ ದಿನ ಮತಗಟ್ಟೆಯಲ್ಲಿ ಅಧಿಕಾರಿಗಳಿಗೆ ಯಾವುದೇ ಸಮಸ್ಯೆ ತೊಂದರೆಯಾಗಬಾರದು ಹಾಗೂ ಇವಿಎಂ ಮಷಿನ್ ನ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಅಧಿಕಾರಿಗಳಿಗೆ ಯಾವುದೇ ಮಾಹಿತಿ ಕೊರತೆಯಾಗದಂತೆ ಎಲ್ಲಾ ಮಾಹಿತಿ ನೀಡಲಾಗುತ್ತಿದೆ. 553 ಪೊಲಿಂಗ್ ಸಿಬ್ಬಂದಿ, 29 ಮಾಸ್ಟರ್ ಟ್ರೈನರ್ ಹಾಗೂ ಸೆಕ್ಟರ್ ಆಫೀಸರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಈ ವೇಳೆ ತಹಶಿಲ್ದಾರ ಮಂಜುನಾಥ, ಬಿಇಒ ಸೋಮಶೇಖರ್ ಗೌಡ, ಉಪ ತಹಶಿಲ್ದಾರ ವಿ.ಎಚ್ ಹೊರಪೇಟೆ, ಕಂದಾಯ ಅಧಿಕಾರಿ ಮಂಜುನಾಥ ಹಿರೇಮಠ, ರವಿಕುಮಾರ್ ನಾಯಕ್ವಾಡ ಸೇರಿದಂತೆ ಅನೇಕರು ಇದ್ದರು