ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮ

ಚುನಾವಣೆಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿ-ಎನ್.ಜಯರಾಮ್
ರಾಯಚೂರು, ಡಿ.೪- ಹಿಂದೆ ನಡೆದಿರುವ ಚುನಾವಣೆ ಗಳಿಗಿಂತ ಈ ವಿಧಾನ ಪರಿಷತ್ ಚುನಾವಣೆ ವಿಭಿನ್ನವಾಗಿದ್ದು,ಚುನಾವಣೆ ಅಧಿಕಾರಿಗಳು ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಚುನಾವಣಾ ವೀಕ್ಷಕ ಎನ್.ಜಯರಾಮ್ ಹೇಳಿದರು.
ಅವರಿಂದ ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಬೇರೆ ಚುನಾವಣೆಯಲ್ಲಿ ಜನ ಸಾಮಾನ್ಯರು ಮತದಾನ ಮಾಡುತ್ತಾರೆ.ಆದರೆ ಈ ಚುನಾವಣೆಯಲ್ಲಿ ಜನ ಪ್ರತಿನಿಧಿಗಳು ಮತದಾರರು ಆಗಿರುತ್ತಾರೆ.ಆದ್ದರಿಂದ ಮತಗಟ್ಟೆ ಅಧಿಕಾರಿಗಳು ನಿಮಗೆ ನೀಡಿರುವಂತೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಬೇರೆ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೀವಿ ಎಂದು ಈ ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು ಎಂದರು. ಈ ಚುನಾವಣೆ ಪಕ್ಷಗಳ ಆದಾರದ ಮೇಲೆ ನಡೆಯುತ್ತಿರುವುದರಿಂದ ಯಾವುದೇ ಅಭ್ಯರ್ಥಿ ಮತ್ತು ಪಕ್ಷದ ಕಡೆ ಹೊಲವನ್ನು ಇಟ್ಟುಕೊಳ್ಳಬಾರದು.ಅಧಿಕಾರಿಗಳು ಎಲ್ಲಾ ಮತದಾರರಿಗೆ ಮತದಾನದ ಬಗ್ಗೆ ತಿಳಿವಳಿಕೆ ನೀಡಬೇಕು.ಮತದಾರರಿಗೆ ಹೇಗೆ ಮತದಾನ ಹಾಕಬೇಕು ಎಂಬುದು ತಿವಳಿಕೆ ನೀಡಬೇಕು ಒರತು ಮತದಾನ ಯಾರಿಗೆ ಹಾಕಬೇಕು ಎಂಬುದು ಹೇಳಬಾರದು ಎಂದರು.ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಯಾವ ರೀತಿ ಪಕ್ಷಾತೀತವಾಗಿ ವಾದ ವಿವಾದಗಳನ್ನು ಕೇಳಿ ನಿರ್ಣಯವನ್ನು ಕೊಡುತ್ತಾರೋ ಅದೇ ರೀತಿಯಲ್ಲಿ ಎಲ್ಲರೂ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಂತೋಷ್ ಕಮಾಗೌಡ, ಅಪರ ಜಿಲ್ಲಾಧಿಕಾರಿ ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.