
ಬೀದರ, ಏ. 22 : ಬೀದರ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ವೀಕ್ಷಕರ ಸಭೆಯಲ್ಲಿ ಬೀದರ ಜಿಲ್ಲೆಯ ಚುನಾವಣಾ ಕಾರ್ಯ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ವಿವರಿಸಿ ಮಾತನಾಡಿದರು.
ಬೀದರ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ ಔರಾದ ಒಂದು ಮೀಸಲಾತಿ ಕ್ಷೇತ್ರವಾಗಿದೆ. ಜಿಲ್ಲೆಯಲ್ಲಿ 1375169 ಮತದಾರರಿದ್ದಾರೆ ಮತ್ತು 1506 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗಾಗಿಯೆ 5 ವಿಶೇಷ ಮತಗಟ್ಟೆ ಪಿಂಕ್ ಪೆÇಲಿಂಗ್ ಭೂತಗಳು ಸ್ಥಾಪಿಸಲಾಗುತ್ತಿದ್ದು . ಇದರಲ್ಲಿ ಎಲ್ಲಾ ಮಹಿಳೆಯರೆ ಕಾರ್ಯನಿರ್ವಹಿಸುತ್ತಾರೆ ಎಂದರು.
ಯಂಗ್ ಪೆÇೀಲಿಂಗ್ ಭೂತ. ವಿಶೇಷ ಚೆತನರ ಮತಗಟ್ಟೆ ಪ್ರತಿ ವಿಧಾನ ಸಭಾ ವ್ಯಾಪ್ತಿಯಲ್ಲಿ ಒಂದೊಂದು ಕಾರ್ಯನಿರ್ವಹಿಸಲಿವೆ. ಬಿದರಿ ಕಲೆಯ ಪೆÇಲಿಂಗ್ ಭೂತ ಬೀದರ ನಗರದಲ್ಲಿ ಎರಡು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ವಿಧಾನ ಸಭಾ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕರ ದೂರುಗಳಿಗೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
155 ಸೆಕ್ಟರ್ ಅಧಿಕಾರಿಗಳು. 19 ಪ್ಲಾಯಿಂಗ್ ಸ್ಕ್ವಾಡ. ಮೊಬೈಲ್ ಸ್ಟಾಟಿಕಲ್ ಸರ್ವಲೈನ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 31 ಚೆಕ್ ಪೆÇೀಸ್ಟಗಳನ್ನು ಸ್ಥಾಪಿಸಲಾಗಿದ್ದು ಎಲ್ಲಾ ವಾಹನಗಳ ತಪಾಸಣೆಯನ್ನು ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾಡುತ್ತಿದ್ದಾರೆ. ಸಿವಿಜಿಲ್ ???ಫ್ ಮೂಲಕ ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದು ಹೇಳಿದರು.
ಲಿಕ್ಕರ್. ಡ್ರಗ್. ಸಿಲ್ವರ್. ಪಾನ ಮಸಾಲ. ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಸಂಬಂಧಿಸಿದವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಕಾರ್ಯ ಚಟುವಟಿಗಳು ಬೀದರ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ ಅವರು ಚುನಾವಣಾ ವೀಕ್ಷಕರಿಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ ಬೀದರ ಜಿಲ್ಲೆ ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಗಳನ್ನು ಹೊಂದಿದೆ. ಬೀದರ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ರಾಜಕೀಯ ಪಕ್ಷಗಳ ಮೇಲೆ 8 ಕೇಸುಗಳನ್ನು ಬುಕ್ ಮಾಡಲಾಗಿದೆ. ಪೆÇಲೀಸ್ ಸಿಬ್ಬಂದಿಗಳು ಹೊರತಾಗಿಯು ಈಗಾಗಲೇ ಅರೆಸೇನಾ ಪಡೆಗಳಾದ ಸಿ.ಆರ್.ಪಿ.ಎಫ್. ಐ.ಟಿ.ಬಿ.ಪಿ ಪೆÇಲೀಸ್ ತುಕಡಿಗಳು ಬೀದರ ಜಿಲ್ಲೆಗೆ ಬಂದಿವೆ ಇದರ ಹೊರತಾಗಿ ಹೋಮ ಗಾರ್ಡಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಚುನಾವಣಾ ವೀಕ್ಷಕರಿಗೆ ಮಾಹಿತಿ ನೀಡಿದರು.
ಜಿಲ್ಲಾ ಸ್ವೀಫ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ. ಅವರು ಮಾತನಾಡಿ ಜಿಲ್ಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಮತದಾನ ಮಾಡಲು ಮತದಾನ ಜಾಗೃತಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಕಳೆದ ಸಲದ ಮತದಾನಕ್ಕಿಂತ ಈ ಭಾರಿ ಹೆಚ್ಚಿನ ಮತದಾನವಾಗುವಂತೆ ಮಾಡಲು ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರಾದ ವಿವೇಕ ಯಾದವ್ ಐ.ಎ.ಎಸ್. ಥೈತುಯಿಂಗ್ ಫಮೈ. ಐ.ಎ.ಎಸ್. ಹೊಂಗಾಯ ವಷರ್ಂಗ. ಐ.ಎ.ಎಸ್. ಪೆÇಲೀಸ್ ವೀಕ್ಷಕರಾದ ಹರ್ದೀಪಸಿಂಗ್ ಧೂನ್ ಐ.ಪಿ.ಎಸ್. ಚುನಾವಣಾ ವೆಚ್ಚ ವೀಕ್ಷಕರಾದ ಸಹಿಲ್ ಗೋಯಲ್. ಐ.ಡಿ.ಎ.ಎಸ್. ಧೀರಜ್ ಸಿಂಗ್ ಐ.ಆರ್.ಎಸ್. ರೋಹಿತ್ ಸಿಂಗ್ ಐ.ಆರ್. ಎಸ್. ( ಸಿ. ಆಯಿಂಡ್ ಸಿ.ಇ).ಮತ್ತು ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಶಿವಕುಮಾರ ಶೀಲವಂತ. ಹಾಗೂ ಆರ್. ಓ. ನೋಡಲ್ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.