ಮತಗಟ್ಟೆಗಳ ಸ್ರಾಂಗ್‍ರೂಂಗೆ ತಹಶೀಲ್ದಾರ್, ಸಿಪಿಐ ಭೇಟಿ ಪರಿಶೀಲನೆ

ಕುರುಗೋಡು.ಡಿ.29 : ಡಿ. 30 ರಂದು ಗ್ರಾಮಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ಮತಗಟ್ಟೆಗಳ ಎಣಿಕೆ ಹಿನ್ನಲೆ ಕುರುಗೋಡು ತಹಶೀಲ್ದಾರ್ ಅಮರೇಶ್‍ಬಿರದಾರ ಮತ್ತು ಕುರುಗೋಡು ಸಿಪಿಐ ಚಂದನ್‍ಗೋಪಾಲ್ ರವರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇಡಲಾದ ಮತಗಟ್ಟೆ ಸ್ರಾಂಗ್‍ರೂಂ ಗೆ ಸೋಮವಾರ ಬೇಟಿ ನೀಡಿ ಪರಿಶೀಲಿಸಿದರು.
ನಂತರ ಕುರುಗೋಡು ಸಿಪಿಐ ಚಂದನ್‍ಗೋಪಾಲ್ ಮಾತನಾಡಿ, ಡಿ. 30 ರಂದು ಗ್ರಾ.ಪಂ. ಮತದಾನದ ಎಣಿಕೆ ಹಿನ್ನಲೆಯಲ್ಲಿ 2ಸಿಪಿಐ, 2ಪಿಎಸ್‍ಐ, 7 ಮಂದಿ ಎಎಸ್‍ಐ, ಮತ್ತು 48 ಮಂದಿ ಪೋಲೀಸರು, ಸೇರಿದಂತೆ 1 ಡಿಎಆರ್ ಪೋಲೀಸ್‍ಬಸ್‍ನ್ನು ಸೂಕ್ತಬಂದೋಬಸ್ತ್‍ಗಾಗಿ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಿಯೋಜಿಸಲಾಗಿದೆ ಎಂದರು. ಡಿ.30 ರಂದು ಕಾಲೇಜಿನಿಂದ 200 ಮೀ.ದೂರದವರೆಗೆ ಬಾದನಹಟ್ಟಿರಸ್ತೆಗೆ ಬ್ಯಾರಿಕೇಡ್‍ಗಳನ್ನು ಅಳವಡಿಸಿ 144ಸೆಕ್ಷನ್ ಜಾರಿಗೊಳಿಸಿ ರಸ್ತೆಯನ್ನು ಬಂದ್ ಮಾಡಲಾಗುವುದು ಎಂದರು. ನಾಗರಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಜೊತೆಗೆ ಮತದಾನ ಎಣಿಕೆಯ ವೇಳೆಯಲ್ಲಿ ಗುಂಪು-ಗುಂಪಾಗಿ ಯಾರು ಸೇರುವಂತಿಲ್ಲ. ಒಂದುವೇಳೆ ಸೇರಿದರೆ ಅವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಚರ್ಚೆ; ಡಿ.30 ರಂದು ನಡೆಯುವ ಮತಎಣಿಕೆ ಹಿನ್ನಲೆಯಲ್ಲಿ ಕಂದಾಯ ಇಲಾಖೆಯಿಂದ ಯಾವಕ್ರಮ ಹಾಗು ಪೋಲೀಸ್‍ಇಲಾಖೆಯಿಂದ ಯಾವ,ಯಾವ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್, ಮತ್ತು ಸಿಪಿಐ ಇತರೆ ಅದಿಕಾರಿಗಳು ಕೆಲಸಮಯ ಚರ್ಚಿಸಿದರು.
ತಹಶೀಲ್ದಾರ್ ಅಮರೇಶ್ ಮಾತನಾಡಿ, ಕಾಲೇಜಿನ 5ಕೊಟಡಿಗಳಲ್ಲಿ ಡಿ.30 ಗ್ರಾ.ಪಂ. ಮತಎಣಿಕೆ ಬೆ. 8 ರಿಂದ ಆರಂಭವಾಗುತ್ತಿದೆ. ಎಲ್ಲಾ ಕೊಟಡಿಗಳಲ್ಲಿ ಸಿಸಿಕ್ಯಾಮೆರಾವನ್ನು ಅಳವಡಿಸಿಲಾಗಿದೆ. ಒಂದುರೂಂಗೆ 3 ಮಂದಿಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕುರುಗೋಡು ಪಿಎಸ್‍ಐ. ಆರ್.ಸುರೇಶಪ್ಪ, ಶಿರಸ್ತೆದಾರ ಚೆನ್ನಪ್ಪ, ಆರ್‍ಐ.ಬಸಲಿಂಗಪ್ಪ, ಸೇರಿದಂತೆ ಗ್ರಾಮಲೆಕ್ಕಾದಿಕಾರಿಗಳು ಇದ್ದರು.