ಮತಗಟ್ಟೆಗಳ ರ್‍ಯಾಷನಲೈಸೇಷನ್ ಸಭೆ

ಕೋಲಾರ,ಆ,೨೯-ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಮತಗಟ್ಟೆಗಳ ರ್‍ಯಾಷನಲೈಸೇಷನ್ ಮಾಡುವ ಕುರಿತು ಇಂದು ಬೆಳಿಗ್ಗೆ ಮನ್ನಣೆ ಪಡೆದ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮತಗಟ್ಟೆಗಳ ಒಟ್ಟುಗೂಡಿಸುವಿಕೆ ಹಾಗೂ ಆಕ್ಸಲರಿ ಮತಗಟ್ಟೆಗಳನ್ನು ಸ್ಥಾಪಿಸುವ ಬಗ್ಗೆ ಮತ್ತು ಶಿಥಿಲಗೊಂಡಿರುವ ಮತಗಟ್ಟೆಗಳನ್ನು ಅದೇ ಆವರಣದಲ್ಲಿ ಹತ್ತಿರದ ಮತಗಟ್ಟೆಗಳಿಗೆ ಸ್ಥಳಾಂತರ ಮಾಡುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಮನ್ನಣೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸಂಕ್ಷಿಪ್ತವಾಗಿ ವಿವರಿಸಲಾಯಿತು. ಮುಂದುವರೆದು ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ ೨೯ ರೊಳಗೆ ಸಲ್ಲಿಸಲು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತಿಳಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ|| ಶಂಕರ್ ವಣಿಕ್ಯಾಳ್, ಜಿಲ್ಲಾ ಚುನಾವಣಾ ತಹಿಸಿಲ್ದಾರ್ ಚುನಾವಣಾ ಶಿರಸ್ತಿದಾರ್ ಮತ್ತು ಮನ್ನಣೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.