ಮತಗಟ್ಟೆಗಳ ಪರಿಶೀಲನೆ

ಬಾದಾಮಿ,ಏ20: ಪಟ್ಟಣದ ವಿವಿದ ಮತಗಟ್ಟೆಗಳಿಗೆ ರಾಜ್ಯ ಸ್ವೀಪ್ ನೋಡಲ್ ಪಿ.ಎಸ್.ವಸ್ತ್ರದ ಅವರು ಭೇಟಿ ನೀಡಿ, ಮತಗಟ್ಟೆಗಳಲ್ಲಿ ಮತದಾರರಿಗೆ ಮಾಡಿರುವ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದರು.
ಬಾದಾಮಿ ನಗರದಲ್ಲಿ ಕಡಿಮೆ ಮತದಾನ ಪ್ರಮಾಣ ಆಗಿರುವ ಪುರಸಭೆ ಕಾರ್ಯಾಲಯದ ಮತಗಟ್ಟೆ ಸಂಖ್ಯೆ:144, ನಗರದ ಮತಗಟ್ಟೆ ಸಂಖ್ಯೆ:146, 147, 148, ಸ.ಹಿ.ಪ್ರಾ.ಶಾಲೆ ಆನಂದ ನಗರ ಮತಗಟ್ಟೆ ಸಂಖ್ಯೆ:169,170,171 ಮತಗಟ್ಟೆಗಳಿಗೆ ಭೇಟಿ ನೀಡಿ ನಂತರ ಮಾತನಾಡಿ ಬಿ.ಎಲ್.ಒ ಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಮತದಾರರಿಗೆ ಮತದಾನ ಮಾಡಲು ಹೆಚ್ಚಿನ ಪ್ರಚಾರ ನೀಡಿ ಮತಗಟ್ಟೆಯಲ್ಲಿರುವ ಸೌಲಭ್ಯಗಳಾದ ನೆರಳು, ಕುಡಿಯುವ ನೀರಿನ ವ್ಯವಸ್ಥೆ ಕೂಡಲು ಕುರ್ಚಿ ವ್ಯವಸ್ಥೆ ಮಾಡಿದ್ದರ ಬಗ್ಗೆ ಮತದಾರರಿಗೆ ತಿಳಿಸಬೇಕು. ಮತ್ತು 80+ ಮತ್ತು ಪಿ.ಡಬ್ಲೂ.ಡಿ ಮತದಾರರಿಗೆ ಮತ ಚಲಾಯಿಸಲು ವಾಹನ ವ್ಯವಸ್ಥೆ ಕಲ್ಪಿಸುವುದು ಮತ್ತು ಸಹಾಯವಾಣಿ ಸಂಖ್ಯೆ: 1950, ಮತ ಕೇಂದ್ರದ ವಿಳಾಸ ಶೌಚಾಲಯದ ನಾಮಫಲಕ ಅಳವಡಿಸುವುದು. ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಲು ಸಂಬಂಧಿಸಿದ ಬಿ.ಎಲ್.ಒ ಗಳು ಮತದಾರರಿಗೆ ತಿಳಿಸಬೇಕು, ಶೌಚಾಲಯಗಳಿಗೆ ನಾಮಫಲಕ, ಎಲ್ಲ ಮತಗಟ್ಟೆಗಳಿಗೆ ಶಾಮಿಯಾನ ವ್ಯವಸ್ಥೆ, ಎಲ್ಲ ಮತದಾರರು ವೋಟರ್ ಹೆಲ್ಪ್ ಲೈನ್ ಆ್ಯಪ್ ಹಾಕಿಕೊಂಡಿರಬೇಕು, ಮತದಾರರಿಗಾಗಿ ವಿಶ್ರಾಂತಿಗಾಗಿ ವಿಶೇಷ ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಯೋಜನಾ ನಿದೇಶಕ ಮುಂಡರಗಿ, ತಹಶೀಲ್ದಾರ ಜೆ.ಐ.ಮಜ್ಜಗಿ, ಹಾಗೂ ತಾ.ಪಂ.ಇಒ ಮಲ್ಲಿಕಾರ್ಜುನ ಕಲಾದಗಿ, ಬಿಇಒ ಆರೀಫ್ ಬಿರಾದರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನವರ, ಟಿ.ಎಮ್.ಸಿ ಮುಖ್ಯಾಧಿಕಾರಿ ಡಾಂಗೆ, ಹಾಗೂ ಎಲ್ಲಾ ಸೆಕ್ಟರ್ ಅಧಿಕಾರಿಗಳು, ಕಂದಾಯ ಇಲಾಖಾ ಅಧಿಕಾರಿಗಳು, ಎಲ್ಲಾ ಬಿ.ಎಲ್.ಒ.ಗಳು ಉಪಸ್ಥಿತರಿದ್ದರು.