
ಹರಪನಹಳ್ಳಿ.ಮಾ.೧೦: ಪ್ರಸಕ್ತ ವರ್ಷ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಮತದಾರರ ನೋಂದಣಿ ಕಾರ್ಯ ಹಾಗೂ ಕಡ್ಡಾಯ ಮತದಾನ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗುತ್ತಿದ್ದು, ಇದರ ಜತೆ
ಮತಗಟ್ಟೆಗಳು ಕೂಡ ಯಾವುದೇ ಸೌಕರ್ಯದಿಂದ
ವಂಚಿತವಾಗದೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು
ಎಂದು ಸಿಬ್ಬಂದಿಗೆ ಚುನಾವಣಾ ಸ್ವೀಪ್ ಸಮಿತಿಯ ಜಿಲ್ಲಾ
ಅಧ್ಯಕ್ಷರೂ ಆದ ವಿಜಯನಗರ ಜಿಲಾ ಪಂಚಾಯಿತಿಯ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಸದಾಶಿವ ಪ್ರಭು
ಸೂಚಿಸಿದರು.
ಇಲ್ಲಿನ ಅಪ್ಪರ ಮೇಗಳಪೇಟೆಯ ಕನ್ನಡ ಸರ್ಕಾರಿ
ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉಪ್ಪಾರಗೇರಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗುರುವಾರ
ಭೇಟಿ ನೀಡಿದ ಅವರು ಮತಗಟ್ಟೆಗಳನ್ನು ವೀಕ್ಷಿಸಿ
ಪರಿಶೀಲಿಸಿದರು.
ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಸುಣ್ಣ-ಬಣ್ಣ ಕಾಣದೇ
ಕೊಠಡಿಗಳು ಹಾಗೆ ಇವೆ. ಪ್ರಸಕ್ತ ವರ್ಷ ಚುನಾವಣೆ
ಇರುವುದರಿಂದ ಎಲ್ಲ ಮತಗಟ್ಟೆಗಳ ಅಂದ ಹೆಚ್ಚಿಸಿ
ಆಕರ್ಷಕವಾಗಿ ಕಾಣಲು ಬೇಕಾದ ಅಗತ್ಯ ತಯಾರಿ
ಮಾಡಿಕೊಳ್ಳಬೇಕು. ಇದರಿಂದ ಮತದಾರನ ಮನಸ್ಸು
ಮತಗಟ್ಟೆಯತ್ತ ಕೈ ಬೀಸಿಕರೆಯುವಂತಾಗಬೇಕು. ಈ ಬಗ್ಗೆ ಸರ್ಕಾರಿಯ
ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು
ಹಾಗೂ ಬಿಎಲ್‌ಒಗಳು ಕೂಡ ಕ್ರಮವಹಿಸಬೇಕು ಎಂದು
ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ
ಅಧಿಕಾರಿ ಕೆ.ಆರ್.ಪ್ರಕಾಶ್, ಪುರಸಭೆಯ ಮುಖ್ಯಾಧಿಕಾರಿ
ಶಿವಕುಮಾರ ಎರಗುಡಿ, ಬಿಎಲ್‌ಒಗಳು ಇತರರಿದ್ದರು.