ಮತಗಟ್ಟೆಗಳಿಗೆ ಸಹಾಯಕ ಚುನಾವಣೆ ಅಧಿಕಾರಿ ಭೇಟಿ-ಪರಿಶೀಲನೆ

ಸಿರವಾರ.ಏ.೧೯- ಮತದಾನಕ್ಕಾಗಿ ಕೇಂದ್ರಕ್ಕೆ ಬರುವ ಮತದಾರರಿಗೆ, ಸಿಬ್ಬಂದಿಗಳಿಗೆ ಕೇಂದ್ರದಲ್ಲಿ ಗಾಳಿ, ಬೆಳಕು, ನೀರು, ನೇರಳು, ಶೌಚಾಲಯ ಸೇರಿಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮಾನ್ವಿ ವಿಧಾನಸಭೆ ವ್ಯಾಪ್ತಿಯ ಸಹಾಯಕ ಚುನಾವಣೆ ಅದಿಕಾರಿ ಪ್ರಕಾಶ ವಡ್ಡರ ಹೇಳಿದರು.
ಪಟ್ಟಣದ ಪ. ಪಂಚಾಯತಿ ಹಳೆ ಕಟ್ಟಡದಲ್ಲಿರುವ ಮತಗಟ್ಟೆ ಹಾಗೂ ಸರಕಾರಿ ಉನ್ನತ್ತಿಕರಿಸಿದ ಶಾಲೆಯಲ್ಲಿರುವ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಕೇಂದ್ರಗಳಿಗೆ ಬೇಟಿ ನೀಡಿ ವಿಕ್ಷಣೆ ಮಾಡಿ, ಈ ಭಾಗದಲ್ಲಿ ಎರಡನೇ ಹಂತ ಮೇ೦೭ ಮತದಾನ ಜರುಗುತ್ತದೆ, ಅಂದು ಮತಗಟ್ಟೆಗೆ ಬರುವ ಸಿಬ್ಬಂದಿ ವರ್ಗ, ಮತದಾರರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಪ.ಪಂಚಾಯತಿ ಹಾಗೂ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು. ಒಂದು ವೇಳೆ ನಿರ್ಲಕ್ಷ ವಹಿಸಿದರೆ ಸೂಕ್ತ ಕ್ರಮಕೈಗೊಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ತಾ.ಪಂ ಇಓ ಬಸವರಾಜ ಶರಬೈ, ಕಂದಾಯ ನಿರೀಕ್ಷಕ ಶ್ರೀನಾಥ, ವಿ.ಎ ವಿಲ್ಸನ್, ಪ.ಪಂಚಾಯತಿಯ ಆರೋಗ್ಯ ನಿರೀಕ್ಷಕಿ ಸುನೀತ ಸಜ್ಜನ್, ಚುನಾವಣೆ ನಿಯೋಜನೆಗೊಂಡ ಸಿಬ್ಬಂದಿ, ಪೊಲೀಸರು ಇದ್ದರು.