ಮತಗಟ್ಟೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ: ಆಶಪ್ಪ ಪೂಜಾರಿ

ಸೇಡಂ,ಮೇ,01: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ಮತಗಟ್ಟೆಯ ಸಿಬ್ಬಂದಿ ವರ್ಗದವರು ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿ ಎಂದು ತಾಲೂಕಾ ಸಹಾಯಕ ಚುನಾವಣಾಧಿಕಾರಿ ಆಶಪ್ಪ ಪೂಜಾರಿ ಹೇಳಿದರು.ಇಲ್ಲಿನ ಊಡಗಿ ರಸ್ತೆಯಲ್ಲಿರುವ ಎನ್.ಟಿ. ಕಾಲೇಜಿನಲ್ಲಿ ಸೇಡಂ ವಿಧಾನ ಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 261 ಮತಗಟ್ಟೆಗಳ ಸಂಬಂಧ ಪಟ್ಟ ಸಿಬ್ಬಂದಿ ವರ್ಗದವರಿಗೆ 2ನೇ ಹಂತದ ಚುನಾವಣಾ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಈ ವೇಳೆಯಲ್ಲಿ ತಾಲೂಕಾ ಸಹಾಯಕ ಚುನಾವಣಾಧಿಕಾರಿ ಆಶಪ್ಪ ಪೂಜಾರಿ, ತಹಸಿಲ್ದಾರ್ ಶಿವಾನಂದ ಮೇತ್ರೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಸುದೀರ್, ಇಓ ಚನ್ನಪ್ಪ ರಾಯಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ವಿಜಯಲಕ್ಷ್ಮಿ ಅವಟೆ, ಇದ್ದರು.